ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಕೊನೆಗೂ ಪ್ರಕಟ

ನಟ ರಾಕಿಂಗ್ ಸ್ಟಾರ್ ಯಶ್‌ ಅವರು ನಾಲ್ಕು ವರ್ಷದಿಂದ ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಲ್ಲದೆ, ಯಶ್ ತಮ್ಮನ್ನು ‘ಕೆಜಿಎಫ್’ ಸಿನಿಮಾಕ್ಕೆ ಸಂಪೂರ್ಣ ತೊಡಗಿಸಿಕೊಂಡಿದ್ದರು. ‘ಕೆಜಿಎಫ್’ ನಂತರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಯಶ್ ಅಭಿಮಾನಿಗಳಿಗೆ ಕುತೂಹಲ ಮೂಡಿಸಿತ್ತು. ಯಶ್ ಸಹ ತಮ್ಮ ಮುಂದಿನ ಸಿನಿಮಾ ಯಾವುದು? ಯಾರು ನಿರ್ದೇಶಕ? ಎಂಬ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಆದರೆ ಇದೀಗ ಎಲ್ಲವೂ ಬಹಿರಂಗವಾಗಿದೆ. ಯಶ್ ಅವರ ಹುಟ್ಟುಹಬ್ಬ ದಿನದಂದು ಯಶ್‌ ತಮ್ಮ ಹೊಸ ಸಿನಿಮಾದ ಬಗ್ಗೆ ತಿಳಿಸಿದ್ದಾರೆ. ನಿರ್ದೇಶಕ ನರ್ತನ್, […]

ಹೆಬ್ರಿ: ಕಬ್ಬಿಣದ ಗುಜ್ಜಿ ತೆಗೆಯುತಿದ್ದಾಗ ವಿದ್ಯುತ್ ಹರಿದು ಯುವಕ ಮೃತ

ಹೆಬ್ರಿ:  ಸೆಂಟ್ರಿಂಗ್ ಕೆಲಸದ ಸ್ಲಾಬ್ ಗೆ ಹಾಕಿದ ಕಬ್ಬಿಣದ ಗುಜ್ಜಿ ತೆಗೆಯುತಿದ್ದಾಗ ವಿದ್ಯುತ್ ಹರಿದು ಯುವಕ ಮೃತ ಪಟ್ಟ ಘಟನೆ ಹೆಬ್ರಿ ತಾಲೂಕಿನ  ನಾಡ್ಪಾಲಿನ ಸೋಮೇಶ್ವರ ಬಳಿ ನಡೆದಿದೆ.   ರವಿ ಪೂಜಾರಿ (28)ಮೃತಪಟ್ಟ ಯುವಕ.  ಜ.8 ರಂದು ರವಿ ಪೂಜಾರಿ ಎಂಬವರು  ದೈವದ ಗುಡಿಯ ಕಬ್ಬಿಣದ ಗುಜಿಯನ್ನು  ಎಳೆದಾಗ ಗುಡಿಯ ಬಳಿಯಿರುವ 11 ಕೆ.ವಿ ಟ್ರಾನ್ಸ್ ಫಾರ್ಮರ್ ಗೆ ಕಬ್ಬಿಣದ ಗುಜ್ಜಿ ತಾಗಿದ ಪರಿಣಾಮ ಆತನ ದೇಹದಲ್ಲಿ  ವಿದ್ಯುತ್ ಪ್ರವಾಹಿಸಿ ಸ್ಥಳದಲ್ಲಿಯೆ ಕುಸಿದು ಬಿದ್ದಿದ್ದು ಚಿಕಿತ್ಸೆಗಾಗಿ […]

ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸರಳ ರೀತಿಯಲ್ಲಿ ಪರ್ಯಾಯ ಆಚರಿಸೋಣ:‌ ಉಡುಪಿಯ ಜನತೆಗೆ ಕರೆಕೊಟ್ಟ ಭಾವಿ ಪರ್ಯಾಯ ಕೃಷ್ಣಾಪುರ ಶ್ರೀಪಾದರು

ಉಡುಪಿ: ಉಡುಪಿಯ ಜನತೆ ನಾಡಹಬ್ಬ ಪರ್ಯಾಯ ಮಹೋತ್ಸವದ ಸಂಭ್ರಮದಲ್ಲಿ ಇರುವಾಗಲೇ ದೇಶದಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ಅಜಾಗರೂಕತೆಯಿಂದ ನಡೆದುಕೊಂಡರೆ ಮುಂದೆ ಸಂಭವಿಸಬಹುದಾದ ಅನಾಹುತಗಳಿಗೆ ನಾವೇ ಹೊಣೆಗಾರರಾಗುತ್ತೇವೆ. ಹೀಗಾಗಿ ತೀರಾ ಸಾಂಪ್ರದಾಯಿಕ ವಿಧಿಗಳಿಗೆ ಒತ್ತು ಕೊಟ್ಟು ಸರಳವಾಗಿ ಈ ಬಾರಿಯ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವವನ್ನು ನಡೆಸಲು ಸಮಿತಿ ತೀರ್ಮಾನಿಸಿದೆ. ಉಡುಪಿಯ ಸಮಸ್ತ ನಾಗರಿಕರು, ಶ್ರೀಕೃಷ್ಣನ ಭಕ್ತರು ಸರ್ಕಾರದ ಕೋವಿಡ್ ನಿಯಮಗಳನ್ನು ಕ್ರಮಬದ್ಧವಾಗಿ ಪಾಲಿಸಿಕೊಂಡು ಪರ್ಯಾಯೋತ್ಸವವನ್ನು ಉತ್ತಮವಾಗಿ ನಡೆಸಿಕೊಡಬೇಕೆಂದು ಭಾವಿ ಪರ್ಯಾಯ ಕೃಷ್ಣಾಪುರ […]

ಕಾರ್ಕಳದಲ್ಲಿ ‘ಯಕ್ಷ ರಂಗಾಯಣ’ ಸ್ಥಾಪನೆ: ರಂಗಭೂಮಿ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣ: ವಿ. ಸುನಿಲ್‌ ಕುಮಾರ್

ಕಾರ್ಕಳ: ನಮ್ಮ ಕರಾವಳಿ ಮತ್ತು ಮಲೆನಾಡು ಪ್ರದೇಶವು ಅತ್ಯಂತ ಶ್ರೀಮಂತ ಕಲೆ ಯಕ್ಷಗಾನ ಮತ್ತು ಸಾಂಸ್ಕೃತಿಕ ಹಿರಿಮೆಗೆ ಪ್ರಸಿದ್ಧ. ಈಗ ಈ ಭಾಗದ ರಂಗಭೂಮಿ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣವಾಗಿದೆ. ಕರ್ನಾಟಕದ ಆರನೇ ರಂಗಾಯಣವಾಗಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ‘ಯಕ್ಷ ರಂಗಾಯಣ’ವು ಆರಂಭವಾಗಲಿದೆ. ಈ ಕುರಿತು ಈಗಾಗಲೇ ಸರ್ಕಾರಿ ಆದೇಶವು ಹೊರಬಿದ್ದಿದ್ದು , ‘ಯಕ್ಷ ರಂಗಾಯಣ’ವು ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ನ ಬಳಿ ಕಾರ್ಯಾರಂಭ ಮಾಡಲಿದೆ. ಈ ಯಕ್ಷರಂಗಾಯಣದಲ್ಲಿ ತುಳು ನಾಟಕದ ಹಿನ್ನೆಲೆಯಲ್ಲಿನ ನಾಟಕಗಳ ರಂಗಪ್ರಯೋಗ […]