ಮಣಿಪಾಲ: ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ (MSDC) ವತಿಯಿಂದ ವಿದ್ಯಾರ್ಥಿಗಳಿಗಾಗಿ “NextGen Summer Camp – Robotics” ಶಿಬಿರವನ್ನು ಏಪ್ರಿಲ್ 20ರಿಂದ 30ರವರೆಗೆ ಆಯೋಜಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 12.00ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಗಳ ಪರಿಚಯ ನೀಡಲಾಗುತ್ತದೆ. “Think Smart. Build Smarter.” ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ತರಬೇತಿಯಲ್ಲಿ ಮೈಕ್ರೋಕಂಟ್ರೋಲರ್‌ಗಳು, ಸೆನ್ಸರ್‌ಗಳು ಮತ್ತು ಆಕ್ಟ್ಯುವೇಟರ್‌ಗಳು, ಕೋಡಿಂಗ್ ಹಾಗೂ ಗ್ರ್ಯಾಂಡ್ ಪ್ರಾಜೆಕ್ಟ್ ಕುರಿತಂತೆ ವಿಶೇಷ ತರಬೇತಿ ನೀಡಲಾಗುತ್ತದೆ.
6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಜೂನಿಯರ್ ಬ್ಯಾಚ್ ಹಾಗೂ 9ರಿಂದ 12ನೇ ತರಗತಿಯವರಿಗೆ ಸೀನಿಯರ್ ಬ್ಯಾಚ್ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವವರಿಗೆ ರೂ. 2,500 ಶುಲ್ಕ ನಿಗದಿಪಡಿಸಲಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ 8123165069 ಸಂಖ್ಯೆಯನ್ನು ಸಂಪರ್ಕಿಸಬಹುದು.

















