ರಕ್ಷಣಾ ಕಾರ್ಯಕ್ಕೆ ಪದೇ ಪದೆ ಅಡ್ಡಿ ಎದುರಾಗುತ್ತಿರುವ ಹಿನ್ನೆಲೆ ಅಮೆರಿಕದ ನಿರ್ಮಿತ ಆಗರ್ ಯಂತ್ರವು ಪೈಪ್‌ಗಳನ್ನು ಕೊರೆಯಲು ಮತ್ತು ತಳ್ಳಲು ನಿಯೋಜಿಸಲಾಗಿದೆ.ಉತ್ತರಕಾಶಿ, ಉತ್ತರಾಖಂಡ್: ಉತ್ತರಾಕಾಶಿಯ ಭಾಗಶಃ ಕುಸಿದಿರುವ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಶುಕ್ರವಾರ ಸುರಂಗದ ರಕ್ಷಣಾ ಕಾರ್ಯಾಚರಣೆ ವೇಳೆ ಭಾರಿ ಸದ್ದು ಬಂದ ಹಿನ್ನೆಲೆ ಸ್ಥಗಿತಗೊಳಿಸಲಾಗಿದೆ.
ಈ ವೇಳೆ, ಶುಕ್ರವಾರ ಮಧ್ಯಾಹ್ನ ಈ ರಕ್ಷಣಾ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಸುರಂಗದ 60 ಮೀಟರ್ ಪ್ರದೇಶದೊಳಗೆ ಹೆವಿ ಡ್ಯೂಟಿ ಆಗರ್ ಮಷಿನ್ 24 ಮೀಟರ್ ಉದ್ದವನ್ನು ಕೊರೆದಿದೆ. ಶುಕ್ರವಾರ ಮಧ್ಯಾಹ್ನ 2.45ರ ವೇಳೆಗೆ ಐದನೇ ಪೈಪ್ ಅಳವಡಿಸುವ ವೇಳೆ ಸುರಂಗದಲ್ಲಿ ದೊಡ್ಡದಾದ ಶಬ್ಧ ಕೇಳಿ ಬಂದಿದೆ. ಈ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಎನ್ಎಚ್ಐಡಿಸಿಎಲ್ ಹೇಳಿಕೆ ನೀಡಿದೆ.
ಈ ಭಾರಿ ಶಬ್ಧವೂ ರಕ್ಷಣಾ ತಂಡದಲ್ಲಿ ಆತಂಕವನ್ನು ಮೂಡಿಸಿತು. ಈ ಯೋಜನೆಯಲ್ಲಿರುವ ತಜ್ಞರು, ಇದರಿಂದ ಸಮೀಪದಲ್ಲಿ ಮತ್ತೆ ಕುಸಿತ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಈ ಬೆನ್ನಲ್ಲೇ ಪೈಪ್ ತಳ್ಳುವ ಯೋಜನೆಯನ್ನು ನಿಲ್ಲಿಸಲಾಗಿದೆ.
ನವೆಂಬರ್ 12ರ ಭಾನುವಾರ ಮುಂಜಾನೆ ಉತ್ತರಖಂಡದ ಬ್ರಹ್ಮಖಾಲ್ ಮತ್ತು ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ನಡುವೆ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗ 21 ಮೀಟರ್ನಷ್ಟು ಕುಸಿತವಾಗಿತ್ತು. ಸುರಂಗ ಮಾರ್ಗದ ದುರಸ್ತಿಗೆ ವಿವಿಧೆಡೆಯಿಂದ 40 ಮಂದಿ ಕಾರ್ಮಿಕರು ತೆರಳಿದ್ದರು. ಈ ವೇಳೆ, ಸುರಂಗದ ಮತ್ತೊಂದು ಭಾಗ ಕುಸಿದಿತ್ತು. ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದರು. ಇದರ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.ಇದರ ಜೊತೆಗೆ ಮತ್ತೊಂದು ಉನ್ನತ ಕಾರ್ಯಕ್ಷಮತೆ ಹೊಂದಿರುವ ಡ್ರಿಲಿಂಗ್ ಮೆಷಿನ್ ಮಧ್ಯಪ್ರದೇಶದ ಇಂದೋರ್‌ನಿಂದ ಏರ್‌ಲಿಫ್ಟ್ ಮಾಡಲಾಗಿದ್ದು, ಡೆಹ್ರಾಡೂನ್ಗೆ ಬಂದಿಳಿದಿದೆ. ಸಿಲ್ಕ್ಯಾರಾಕ್ಕೆ ರಸ್ತೆ ಮಾರ್ಗದ ಮೂಲಕ ತರಲಾಗುವುದು. ಡ್ರಿಲ್ಲಿಂಗ್ ಆರಂಭಕ್ಕೆ ಮುನ್ನ ಈ ಯಂತ್ರದ ಜೋಡಣೆಯನ್ನು ಸ್ಥಳದಲ್ಲಿ ನಡೆಸಲಾಗುವುದು ಎಂದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುರಂಗವೂ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಸುರಂಗವು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಅಡಿ ನಿರ್ಮಾಣ ಆಗುತ್ತಿದೆ. (ಪಿಟಿಐ)
ರಕ್ಷಣಾ ಕಾರ್ಯಾಚರಣೆ ಪರಿಶೀಲನೆಗೆ ಸ್ಥಳಕ್ಕೆ ಪ್ರಧಾನ ಮಂತ್ರಿ ಸಚಿವಾಲಯದ ಉಪ ಕಾರ್ಯದರ್ಶಿ ಮಂಗೇಶ್ ಗಿಲ್ಡಿಯಲ್ ಅವರು ಕೂಡ ಆಗಮಿಸಿ, ಪರಿಸ್ಥಿತಿ ಅವಲೋಕಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.