ಕಟಪಾಡಿ: ದೇಶ ಭಕ್ತಿ ಎನ್ನುವುದು ಯಾವತ್ತೋ ಒಂದು ದಿನದ ಆಚರಣೆ ಅಲ್ಲ, ಅದು ಪ್ರತಿದಿನವೂ ನಮ್ಮೊಳಗೆ ನಮ್ಮ ಯೋಚನೆಗಳಲ್ಲಿ ಅಡಕವಾಗಿರುವಂಥದ್ದು ಎಂದು ಖ್ಯಾತ ಆರ್ಥೋಪೆಡಿಕ್ ಸರ್ಜನ್ ಅರ್ಜುನ್ ಬಲ್ಲಾಳ್ ಹೇಳಿದರು. ಅವರು ಇತ್ತೀಚಿಗೆ ತ್ರಿಶಾ ವಿದ್ಯಾ ಕಾಲೇಜು ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಮತ್ತು ಎಸ್ವಿಎಸ್ ವಿದ್ಯಾವರ್ಧಕ ಸಂಘ ಜೊತೆಯಾಗಿ ಆಚರಿಸಿದ್ದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ಧ್ವಜಾರೋಹಣಗೈದು ಮಾತನಾಡಿದರು.
ಕಾರ್ಯಕ್ರಮದಲ್ಲಿ ತ್ರಿಶಾ ಹಾಗೂ ಎಸ್.ವಿ.ಎಸ್. ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.