ಕಾರ್ಕಳ: ರಸ್ತೆಯ ದುರಸ್ತಿಗಾಗಿ ಎಳ್ಳಾರೆ ಹೊಯ್ಗೆಜಡ್ಡಿನ ಜನರು ವಿನೂತನ ರೀತಿಯ ಪ್ರತಿಭಟನೆಗೆ ಇಳಿದಿದ್ದಾರೆ.
ಈ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಎಳ್ಳಾರೆ-ಹೊಯ್ಗೆಜಡ್ಡು ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಗ್ರಾಮಸ್ಥರಿಗೆ ನಡೆದುಕೊಂಡು ಹೋಗಲು ಕಷ್ಟಪಡಬೇಕಾದ ಸ್ಥಿತಿ ಎದುರಾಗಿದೆ. ಇದರಿಂದ ಸಾರ್ವಜನಿಕರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ಸಮೀಪಿಸುತ್ತಿದ್ದಂತೆ ಗ್ರಾಮಸ್ಥರು ಹೊಸ ರೀತಿಯ ಪ್ರತಿಭಟನೆಗೆ ಮುಂದಾಗಿದ್ದು, ಆ ಮೂಲಕ ಗ್ರಾಪಂಗೆ ಸವಾಲೊಡ್ಡಿದ್ದಾರೆ. ಮತದಾನ ಬಹಿಷ್ಕಾರದ ಬ್ಯಾನರ್ ಆಳವಡಿಸುವ ಮೂಲಕ ಚುನಾವಣೆ ಹೊಸ್ತಿಲಲ್ಲೇ ಗ್ರಾಪಂ ಸದಸ್ಯರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ಬ್ಯಾನರ್ ಅಳವಡಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ‘ನಾಯಕರುಗಳೇ ನಮ್ಮ ಮತ ಬೇಕು, ನಮ್ಮ ಸಮಸ್ಯೆ ಬೇಡವೇ’. ವೋಟಿಗಾಗಿ ಇದೇ ದಾರಿಯಲ್ಲಿ ಓಡಾಡುತ್ತೀರಿ, ಆಮೇಲೆ ಈ ದಾರಿಯನ್ನು ಮರೆತೇ ಹೋಗುತ್ತೀರಿ. ಎಳ್ಳಾರೆ- ಹೊಯ್ಗೆಜಡ್ಡು ರಸ್ತೆಯ ಅವ್ಯವಸ್ಥೆ ಬಗ್ಗೆ ಗಮನ ಹೇಗೆ ನಿಮಗಿಲ್ಲವೋ, ಹಾಗೆ ನಮಗೆ ಮತ ಹಾಕಬಾರದೆಂದು ನಿರ್ಧಾರ ನಮ್ಮದು. ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಇಲ್ಲವಾದಲ್ಲಿ ಮತಕ್ಕಾಗಿ ಆಗಮಿಸದಿರಿ. ರಸ್ತೆ ಅಭಿವೃದ್ಧಿ ಆಗುವವರೆಗೂ ನಮ್ಮ ಹೋರಾಟ. ರಸ್ತೆ ಅಭಿವೃದ್ಧಿಯಾಗದೆ ಬ್ಯಾನರನ್ನು ಕಿತ್ತು ತೆಗೆದವರು ನಾಯಿ ಮತ್ತು ಕತ್ತೆಗೆ ಸಮಾನ’ ಎಂದು ಬರೆಯಲಾಗಿದೆ. ನೊಂದ, ಗ್ರಾಮಸ್ಥರು ಎಳ್ಳಾರೆ