ಟಿಕ್ ಟಾಕ್ ಹಿಂದೆ ಬಿದ್ದ ರಿಲಾಯನ್ಸ್, 5 ಬಿಲಿಯನ್ ಡಾಲರ್ ಗೆ ಖರೀದಿಸಲು ಮುಂದಾಯ್ತಾ?

ಬೆಂಗಳೂರು: ಇತ್ತಿಚೆಗಷ್ಟೇ ನಿಷೇಧವಾಗಿದ್ದ ಟಿಕ್ ಟಾಕ್  ಅನ್ನು ಭಾರತೀಯ ಉದ್ಯಮಿಯೊಬ್ಬರು ಈ ಕಂಪೆನಿಯನ್ನು ಖರೀದಿ ಮಾಡ್ತಾ ಇದೆ ಅನ್ನೋ ಸುದ್ದಿ ಇದೀಗ ಮತ್ತೆ ಮತ್ತೆ ಕೇಳಿಬರುತ್ತಿದೆ. ದಿನೇ ದಿನೇ ಈ ಸುದ್ದಿ ಬೇರೆ ಬೇಋಎ ರೂಪ ಪಡೆದುಕೊಳ್ಳುತ್ತಿದೆ.

ಭಾರತದ ಪ್ರತಿಷ್ಠಿತ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಭಾರತದಲ್ಲಿ ಟಿಕ್ ಟಾಕ್ ನ್ನು 5$ ಬಿಲಿಯನ್ ಗೆ ಖರೀದಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬೈಟ್ ಡಾನ್ಸ್ ಸಂಸ್ಥೆಯ ಟಿಕ್ ಟಾಕ್ ಜೊತೆಗೆ ಅಂಬಾನಿ ಮಾಲಿಕತ್ವದ ಸಂಸ್ಥೆಯೊಂದಿಗೆ ಖರೀದಿಗೆ ಸಂಬಂಧಿಸಿದಂತೆ ಮಾತುಕತೆ ಪ್ರಾರಂಭಿಸಿದ್ದು 5$ಬಿಲಿಯನ್ ಗೆ ಖರೀದಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಚೀನಾದ ಹೊರಭಾಗದಲ್ಲಿ ಕಿರು ವಿಡಿಯೋಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, ಈವರೆಗೂ 611 ಮಿಲಿಯನ್ ಡೌನ್ ಲೋಡ್ ಗಳಾಗಿವೆ. ಆದರೆ ಆದಾಯದ ವಿಷಯದಲ್ಲಿ ಚೀನಾ, ಅಮೆರಿಕ,  ಬ್ರಿಟನ್ ಟಿಕ್ ಟಾಕ್ ನ ಆದಾಯದ ಶೇ.90 ರಷ್ಟು ಪಾಲನ್ನು ಹೊಂದಿದೆ.

ರಿಲಾಯನ್ಸ್ ಜಿಯೋ ನಲ್ಲಿ ಹೂಡಿಕೆ ಮಾಡಿದ್ದ ಫೇಸ್ ಬುಕ್ ಸಹ ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ರೀಲ್ಸ್ ನ್ನು ಭಾರತದಲ್ಲಿ ಪರಿಚಯಿಸಿ ಕಿರು ವಿಡಿಯೋಗಳನ್ನು ಅಪ್ ಲೋಡ್ ಮಾಡಿ ಹಂಚಿಕೊಳ್ಳುವ ವೇದಿಕೆಯನ್ನು ಸೃಷ್ಟಿಸಿತ್ತು.ಇದೀಗ ಟಿಕ್ ಟಾಕ್ ಮತ್ತೆ ರಿಲಾಯನ್ಸ್ ಪ್ರಾಯೋಜಕತ್ವದಲ್ಲಿ ಬರುತ್ತಿದೆಯಾ ಅನ್ನೋ ಪ್ರಶ್ನೆ ಎದ್ದಿದೆ.ಸದ್ಯದಲ್ಲೇ ಇದಕ್ಕೆ ಉತ್ತರ ಸಿಗಬಹುದು ಎನ್ನುವುದು ಎಲ್ಲರ ನಿರೀಕ್ಷೆ