ಕೋವಿಡ್ 19 ಆರ್‌ ಟಿಪಿಸಿಆರ್ ಪರೀಕ್ಷೆ ದರ ಕಡಿತ: ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಸರಕಾರದ ಮಹತ್ವದ ನಿರ್ಧಾರ

ಬೆಂಗಳೂರು: ಕೋವಿಡ್ 19ಗೆ ಸಂಬಂಧಿಸಿದಂತೆ ಸರಕಾರಿ ಆಸ್ಪತ್ರೆಗಳಿಂದ ಖಾಸಗಿ ಲ್ಯಾಬ್‌ಗಳಿಗೆ ರೆಫರ್ ಮಾಡುವ ಸೋಂಕಿತರ ಆರ್‌ಟಿಪಿಸಿಆರ್ ಪರೀಕ್ಷೆ ದರವನ್ನು 2000 ದಿಂದ 1,500 ರೂಪಾಯಿಗೆ ಇಳಿಸಲಾಗಿದೆ. ಅದೇ ರೀತಿ ನೇರವಾಗಿ ಖಾಸಗಿ ಲ್ಯಾಬ್‌ಗಳಿಗೇ ತೆರಳಿ ಈ ಪರೀಕ್ಷೆ ನಡೆಸಿದರೆ ಅಲ್ಲಿ ವಿಧಿಸಲಾಗುತ್ತಿದ್ದ ದರವನ್ನು 3,000ದಿಂದ 2,500 ರೂ.ಗಳಿಗೆ ಇಳಿಸಲಾಗಿದೆ ಎಂದು  ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕೋವಿಡ್ ಕಾರ್ಯಪಡೆ ಸಭೆಯಲ್ಲಿ ನಡೆದ ನಿರ್ಧಾರಗಳ ಕುರಿತು ಅವರು ಮಾಹಿತಿ ನೀಡಿದ್ದು, ಈ ದರ […]

ಉಡುಪಿ: ಇಂದು 322 ಮಂದಿಗೆ ಕೊರೊನಾ ಪಾಸಿಟಿವ್: ಐದು ಮಂದಿ ಕೊರೊನಾದಿಂದ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು 322 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7497ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 333 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 281 ಮಂದಿ ಸಹಿತ 614 ಸೋಂಕಿತರು ಇಂದು ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ 4872 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 2550 ಸಕ್ರಿಯ ಕೊರೊನಾ ಸೋಂಕಿತರಿದ್ದು, 1301 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ […]

ಟಿಕ್ ಟಾಕ್ ಹಿಂದೆ ಬಿದ್ದ ರಿಲಾಯನ್ಸ್, 5 ಬಿಲಿಯನ್ ಡಾಲರ್ ಗೆ ಖರೀದಿಸಲು ಮುಂದಾಯ್ತಾ?

ಬೆಂಗಳೂರು: ಇತ್ತಿಚೆಗಷ್ಟೇ ನಿಷೇಧವಾಗಿದ್ದ ಟಿಕ್ ಟಾಕ್  ಅನ್ನು ಭಾರತೀಯ ಉದ್ಯಮಿಯೊಬ್ಬರು ಈ ಕಂಪೆನಿಯನ್ನು ಖರೀದಿ ಮಾಡ್ತಾ ಇದೆ ಅನ್ನೋ ಸುದ್ದಿ ಇದೀಗ ಮತ್ತೆ ಮತ್ತೆ ಕೇಳಿಬರುತ್ತಿದೆ. ದಿನೇ ದಿನೇ ಈ ಸುದ್ದಿ ಬೇರೆ ಬೇಋಎ ರೂಪ ಪಡೆದುಕೊಳ್ಳುತ್ತಿದೆ. ಭಾರತದ ಪ್ರತಿಷ್ಠಿತ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಭಾರತದಲ್ಲಿ ಟಿಕ್ ಟಾಕ್ ನ್ನು 5$ ಬಿಲಿಯನ್ ಗೆ ಖರೀದಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೈಟ್ ಡಾನ್ಸ್ ಸಂಸ್ಥೆಯ ಟಿಕ್ ಟಾಕ್ ಜೊತೆಗೆ ಅಂಬಾನಿ ಮಾಲಿಕತ್ವದ ಸಂಸ್ಥೆಯೊಂದಿಗೆ ಖರೀದಿಗೆ […]

ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಸ್ಥಿತಿ ಗಂಭೀರ: ಶೀಘ್ರ ಚೇತರಿಕೆಗೆ ಅಭಿಮಾನಿಗಳ ಪ್ರಾರ್ಥನೆ

ಚೆನ್ನೈ: ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಗೆ ಕೊರೋನಾ ಭಾಧಿಸಿದ್ದು , ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವ ಹಿನ್ನಲೆಯಲ್ಲಿ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿದೆ. ಆಗಸ್ಟ್ 5ರಿಂದ 74 ವರ್ಷದ ಎಸ್‍ಪಿಬಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ರಾತ್ರಿ ಅವರು ಆರೋಗ್ಯ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ಸ್ಥಳಾಂತರಿಸಿ ಲೈಫ್ ಸಪೋರ್ಟ್ ಅಳವಡಿಸಲಾಗಿದೆ. ಈ ಹಿಂದೆ ವಿಡಿಯೋ ಮಾಡಿ ನನ್ನ ಕುಟುಂಬದ ಹಿತದೃಷ್ಟಿಯಿಂದ ನಾನು ಸ್ವಯಂ ಆಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಯೊಂದಿಗೆ ವಿಶ್ರಾಂತಿ […]

ಸ್ವಯಂ ಉದ್ಯೋಗ ಸಾಲ-ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಉಡುಪಿ: ಭೋವಿ ಅಭಿವೃದ್ಧಿ ನಿಗಮದಿಂದ ಪ್ರಸ್ತುತ ಸಾಲಿನ ನಿರುದ್ಯೋಗಿ ಯುವ ಜನರಿಗೆ ಸ್ವಯಂ ಉದ್ಯೋಗ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಭೋವಿ, ಅಭಿವೃದ್ಧಿ ನಿಗಮ, “ಬಿ” ಬ್ಲಾಕ್, 2ನೇ ಮಹಡಿ ಕೊಠಡಿ ಸಂಖ್ಯೆ 307, ಜಿಲ್ಲಾಡಳಿತ ಕಛೇರಿಗಳ ಸಂಕೀರ್ಣ, ರಜತಾದ್ರಿ ಮಣಿಪಾಲ ಉಡುಪಿ ಅಥವಾ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574884 ಗೆ ಸಂಪರ್ಕಿಸುವಂತೆ ಜಿಲ್ಲಾ ವ್ಯವಸ್ಥಾಪಕರು ಶೈಲಜಾ ದೇಶ್‌ಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.