ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ (WPL) ಉದ್ಘಾಟನಾ ಆವೃತ್ತಿಯ ಹರಾಜಿನಲ್ಲಿ ಮಾರಾಟವಾದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತದ ಉಪನಾಯಕಿ ಮತ್ತು ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಫೆಬ್ರವರಿ 13 ಸೋಮವಾರದಂದು ಇತಿಹಾಸ ಬರೆದಿದ್ದಾರೆ. ಮುಂಬೈನಲ್ಲಿ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಮೃತಿ ಅವರನ್ನು ಬರೋಬ್ಬರಿ 3.4 ಕೋಟಿ ರೂ.ಗಳ ಮೊತ್ತಕ್ಕೆ ಖರೀದಿಸಿದೆ.
ಏತನ್ಮಧ್ಯೆ,ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್‌ಗೆ 1.8 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಆಶ್ಲೀ ಗಾರ್ಡನರ್ ಅವರನ್ನು ಗುಜರಾತ್ ಜೈಂಟ್ಸ್ ರೂ 3.2 ಕೋಟಿಗೆ ಖರೀದಿಸಿದೆ.
ಮಾರ್ಕ್ವಿ ಪಟ್ಟಿ ಸಂಖ್ಯೆ 1 ರಲ್ಲಿ ಮಾರಾಟವಾದ ಆಟಗಾರರು:
ಸ್ಮೃತಿ ಮಂಧಾನ (ಭಾರತ) – ಆರ್‌ಸಿಬಿಗೆ 3.4 ಕೋಟಿ ರೂ
ಆಶ್ಲೀ ಗಾರ್ಡ್ನರ್ (ಆಸ್ಟ್ರೇಲಿಯಾ) – ಗುಜರಾತ್ ಜೈಂಟ್ಸ್‌ಗೆ 3.2 ಕೋಟಿ ರೂ
ಹರ್ಮನ್‌ಪ್ರೀತ್ ಕೌರ್ (ಭಾರತ) – ಎಂಐ ಗೆ 1.8 ಕೋಟಿ ರೂ
ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ) – ಆರ್‌ಸಿಬಿಗೆ 1.8 ಕೋಟಿ ರೂ
ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್) – ಯುಪಿ ವಾರಿಯರ್ಜ್‌ಗೆ 1.8 ಕೋಟಿ ರೂ
ಸೋಫಿ ಡಿವೈನ್ (ನ್ಯೂಜಿಲೆಂಡ್) – ಆರ್‌ಸಿಬಿಗೆ 50 ಲಕ್ಷ ರೂ