ಪ್ರಧಾನಿ ಮೋದಿ ಭೇಟಿ ಮಾಡಿದ ಕನ್ನಡ ಚಿತ್ರರಂಗದ ಕಲಾವಿದರು

ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ ನಟರಾದ ಯಶ್, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಬ್ಲಾಗರ್ ಅಯ್ಯೋ ಶ್ರದ್ಧಾ ಮತ್ತು ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಬೆಂಗಳೂರಿನ ಇಂಡಿಯಾ ಪವಿಲಿಯನ್ ನಲ್ಲಿ ಏರೋ ಶೋನಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದು ಈ ಸಂದರ್ಭ ಭೇಟಿ ನಡೆದಿದೆ. ಪ್ರಧಾನಿ ಮೋದಿಯವರನ್ನು ಭೇಟಿಯಾದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಯಶ್, ಮೋದಿಯವರ ಬಳಿ ಚಿತ್ರೋದ್ಯಮದ ಬಗ್ಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ. […]

ಮಹಿಳಾ ಪ್ರೀಮಿಯರ್ ಲೀಗ್‌ : 3.4 ಕೋಟಿ ರೂ ಗೆ ಆರ್.ಸಿ.ಬಿ ಪಾಲಾದ ಸ್ಮೃತಿ ಮಂಧಾನಾ

ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ (WPL) ಉದ್ಘಾಟನಾ ಆವೃತ್ತಿಯ ಹರಾಜಿನಲ್ಲಿ ಮಾರಾಟವಾದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತದ ಉಪನಾಯಕಿ ಮತ್ತು ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಫೆಬ್ರವರಿ 13 ಸೋಮವಾರದಂದು ಇತಿಹಾಸ ಬರೆದಿದ್ದಾರೆ. ಮುಂಬೈನಲ್ಲಿ ನಡೆದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಮೃತಿ ಅವರನ್ನು ಬರೋಬ್ಬರಿ 3.4 ಕೋಟಿ ರೂ.ಗಳ ಮೊತ್ತಕ್ಕೆ ಖರೀದಿಸಿದೆ. ಏತನ್ಮಧ್ಯೆ,ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್‌ಗೆ 1.8 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಆಶ್ಲೀ […]

ಫೆ.14 ರಂದು ಹುತಾತ್ಮ ವೀರ ಯೋಧರಿಗೆ ಗೌರವಾರ್ಪಣಾ ಕಾರ್ಯಕ್ರಮ

ಉಡುಪಿ: ಫೆ.14 ರಂದು ಶ್ರೀ ಸಾಯಿ ಈಶ್ವರ್ ಗುರೂಜಿ ನೇತೃತ್ವದಲ್ಲಿ ಹುತಾತ್ಮ ವೀರ ಯೋಧರಿಗೆ ಗೌರವಾರ್ಪಣಾ ಕಾರ್ಯಕ್ರಮವು ಐ ಸ್ಟ್ಯಾಂಡ್ ಫಾರ್ ದಿ ನೇಶನ್ ಸಂಸ್ಥೆಯ ಸಹಭಾಗಿತ್ವದಲ್ಲಿ ಅಜ್ಜರಕಾಡಿನ ಉಡುಪಿ ಜಿಲ್ಲಾ ಯೋಧರ ಸ್ಮಾರಕದಲ್ಲಿ ಮಧ್ಯಾಹ್ನ 3.15 ಕ್ಕೆ ನಡೆಯಲಿದೆ. ಫೆ. 14, 2019 ರಂದು ಜಮ್ಮುವಿನ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ದೇಶದ ಭದ್ರತಾ ಪಡೆಯ ಯೋಧರು ತೆರಳುತ್ತಿದ್ದ ವಾಹನಕ್ಕೆ ಆತ್ಮಹತ್ಯಾ ದಳದ ಉಗ್ರರು ಬಾಂಬು ವಿಸ್ಪೋಟಿಸಿ 40 ಮಂದಿ ಯೋಧರು ಹುತಾತ್ಮರಾದ ನೆನಪಿಗಾಗಿ ಪ್ರತಿವರ್ಷ ಈ […]

ಹಾವಂಜೆ ಗ್ರಾಮ ವಿಕಾಸ ಸಮಿತಿ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬಗ್ಗೆ ಭಯ ಬೇಡ ಕಾರ್ಯಕ್ರಮ

ಹಾವಂಜೆ, ಫೆ. 12: ಹಾವಂಜೆ ಗ್ರಾಮ ವಿಕಾಸ ಸಮಿತಿ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ‘ಎಸ್.ಎಸ್.ಎಲ್.ಸಿ ಪರೀಕ್ಷೆ ಭಯ ಬೇಡ’ ಕಾರ್ಯಕ್ರಮ ಭಾನುವಾರ ಹಾವಂಜೆಯ ಶ್ರೀ ಮಂಜುನಾಥ ಸಭಾಭವನದಲ್ಲಿ ನಡೆಯಿತು. ಉಪನ್ಯಾಸಕ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಗಣೇಶ್ ಪ್ರಸಾದ್ ಜಿ. ನಾಯಕ್ ಉದ್ಘಾಟನೆ ನೆರವೇರಿಸಿ ಸಂಪನ್ಮೂಲ ಉಪನ್ಯಾಸ ನೀಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ವೇಳಾಪಟ್ಟಿ ಹಾಕಿ ಅಧ್ಯಯನ ನಡೆಸಿದರೆ ಪರಿಣಾಮಕಾರಿ ಫಲಿತಾಂಶವನ್ನು ನಿರೀಕ್ಷಿಸಬಹುದು. ಕೇವಲ ಬುದ್ಧಿವಂತಿಕೆಯಿಂದ ದೊಡ್ಡ ಮಟ್ಟಿನ ಬದಲಾವಣೆ […]

ಬಾಲ ಶಿವರಿಂದ ಶಿವಮಯವಾಯ್ತು ಶಿವಪಾಡಿ

ಮಣಿಪಾಲ: ಭಾನುವಾರದಂದು ಶಿವಪಾಡಿಯ ಶಿವಭೂಮಿಯು ಬಾಲಶಿವರಿಂದ ಕಳೆಗಟ್ಟಿತು. ಅತಿರುದ್ರಯಾಗದ ಪ್ರಯುಕ್ತ ಶಿವಪಾಡಿಯ ಶ್ರೀ ಉಮಾ ಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಸಮರ್ಪಣಾ ದಿನದ ಅಂಗವಾಗಿ ನಡೆದ ಬಾಲಶಿವ ವೇಷಭೂಷಣ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ 150 ಕ್ಕೂ ಹೆಚ್ಚಿನ ಬಾಲಶಿವ ವೇಷಧಾರಿ ಮಕ್ಕಳು ಭಾಗವಹಿಸಿದರು. ಶಿವಪಾಡಿಯೆಲ್ಲಾ ಶಿವಮಯವಾಗಿ ಭಕ್ತರು ಪುಳಕಿತಗೊಂಡರು.