ದೊಡ್ಡಣ್ಣಗುಡ್ಡೆ: ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಜನವರಿ 22ರ ಸೋಮವಾರದಂದು ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠೆಯ ಪರ್ವಕಾಲದ ಸಂಭ್ರಮಾಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ.
ಆ ಪ್ರಯುಕ್ತ ನೆರವೇರಲಿರುವ ಸಮಗ್ರ ಕಾರ್ಯಕ್ರಮದ ಮಾಹಿತಿಯುಳ್ಳ ಆಮಂತ್ರಣ ಪತ್ರಿಕೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಸಂಘ ಚಾಲಕ್ ಮಟ್ಟು ಲಕ್ಷ್ಮೀನಾರಾಯಣ ರಾವ್ ಬಿಡುಗಡೆಗೊಳಿಸಿ ಧರ್ಮ ಪುನರುತ್ಥಾನ ಉತ್ಸವವು ಪ್ರಪಂಚದಾದ್ಯಂತ ದೀಪಾವಳಿಯಾಗಿ ಆಚರಿಸಿ ಈ ಮಹಾನ್ ಕಾರ್ಯಕ್ಕೆ ಶುಭ ಹಾರೈಸಲಿವೆ ಎಂದರು.
ವೇದಮೂರ್ತಿ ಕೆರ್ಮುಂಡೆಲು ಶ್ರೀಪತಿ ಭಟ್ ಮಾತನಾಡಿ ಶ್ರೀರಾಮ ಪ್ರತಿಷ್ಠಾಪನೆಯ ದಿನದ ವಿಶೇಷತೆಯ ಬಗ್ಗೆ ತಿಳಿಸಿ ಸನಾತನ ಧರ್ಮದ ಅಸ್ತಿತ್ವ ಜಗತ್ತಿಗೆ ತಿಳಿಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಅರವಿಂದ ಹೆಬ್ಬಾರ್, ಆನಂದ್ ಬಾಯಾರಿ, ಮಧುಕರ ಮುದ್ರಾಡಿ ವಿಟ್ಟಲ್ ಪ್ರಭು ಸಗ್ರಿ,
ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ
ಉಷಾ ರಮಾನಂದ್, ಪರಿವೀಕ್ಷಕಿ ಕುಮಾರಿ ಸ್ವಾತಿ ಆಚಾರ್ಯ, ಶಿಕ್ಷಕ -ಶಿಕ್ಷಕಿಯರು,
ಶಾರದಮ್ಮ ಗೋವಿಂದ ಭಟ್ ಅರ್ಚಕ ಅನೀಶ್ ಆಚಾರ್ಯ, ಶಂಕರ್ ಭಟ್ ಪೆರಂಪಳ್ಳಿ
ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಇತರ ಭಕ್ತರುಗಳು ಪಾಲ್ಗೊಂಡಿದ್ದರು.
ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ರಾಮ ಜನ್ಮ ಭೂಮಿಗಾಗಿ ಹೋರಾಟ ನಡೆಸಿ ಪ್ರಾಣತ್ಯಾಗ ಮಾಡಿದವರನ್ನು ಸ್ಮರಿಸಲಾಯಿತು.