ಉಡುಪಿXPRESS ಪರ್ಯಾಯ ವಿಶೇಷ ಸಂಚಿಕೆ “ಪರ್ಯಾಯ ಪುಣ್ಯೋತ್ಸವ” ಬಿಡುಗಡೆ

ಉಡುಪಿ: ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಉಡುಪಿXPRESS ನ ವಿಶೇಷ ಸಂಚಿಕೆ “ಪರ್ಯಾಯ ಪುಣ್ಯೋತ್ಸವ” ವನ್ನು ಬುಧವಾರ ಕೃಷ್ಣಮಠದ ಕನಕದಾಸ ಮಂಟಪದಲ್ಲಿ ಬಿಡುಗಡೆಗೊಳಿಸಲಾಯಿತು. ಪರ್ಯಾಯ ಪೀಠವೇರಲಿರುವ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಸಂಚಿಕೆ ಅನಾವರಣಗೊಳಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪರ್ಯಾಯ ಉತ್ಸವ ಸಮಿತಿ, ಹೊರೆಕಾಣಿಕೆಯ ಸಮಿತಿಯ ಸದಸ್ಯರು, ಉಡುಪಿXPRESS ಮಾರುಕಟ್ಟೆ ವಿಭಾಗದ ಸ್ವರೂಪ್ ಶ್ರೀಯಾನ್, ಅಶೋಕ್, ನಿತಿನ್ ಉಪಸ್ಥಿತರಿದ್ದರು.

ಉಡುಪಿ: ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ 10ಕೋಟಿ ರೂ. ಬಿಡುಗಡೆಗೆ ಕ್ರಮ: ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್

ಉಡುಪಿ: ಐತಿಹಾಸಿಕ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ಸರ್ಕಾರ ಪೂರ್ಣ ಸಹಕಾರ ನೀಡುತ್ತಿದ್ದು, ನಗರೋತ್ಥಾನ ಅಭಿವೃದ್ಧಿಗಾಗಿ ಈಗಾಗಲೇ 30 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ. ಉಡುಪಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಶ್ರೀಮಠದ ಪರ್ಯಾಯಕ್ಕೆ ಮುಖ್ಯಮಂತ್ರಿಯವರು 10 ಕೋಟಿ ರೂಪಾಯಿ ಬಿಡುಗಡೆ ಮಾಡಲು ಕ್ರಮ ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಕುಟುಂಬ ಸಮೇತ ಪಾಲ್ಗೊಳ್ಳುತ್ತಿರುವೆ. […]

ಶ್ರೀಕೃಷ್ಣಾಪುರ ಮಠದ ಪರ್ಯಾಯದ ಕೊನೆಯ ದಿನದ ಭೂರಿ ಭೋಜನ ಸೂರೆ ಹೊಡೆದ ಭಕ್ತರು

ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಪ್ರಸ್ತುತ ಪರ್ಯಾಯದ ಕೊನೆಯ ದಿನದ ಭೂರಿಭೋಜನದ ಪಲ್ಲಪೂಜೆಯನ್ನು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ನೆರವೇರಿಸಿದರು. ಭೂರಿಭೋಜನದ ನಂತರ ಉಳಿದ ಅಡುಗೆಯನ್ನೆಲ್ಲಾ ಸಾರ್ವಜನಿಕರಿಗೆ ಸೂರೆ ಬಿಡಲಾಯಿತು.

ಕೊಲ್ಲೂರು ದೇವಸ್ಥಾನಕ್ಕೆ ಕೆ.ಎಲ್ ರಾಹುಲ್ ಭೇಟಿ

ಕುಂದಾಪುರ: ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್ ಕೆ.ಎಲ್.ರಾಹುಲ್ ಮಂಗಳವಾರ ರಾತ್ರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಮೂಕಾಂಬಿಕೆಯ ದರ್ಶನ ಪಡೆದು ಅರ್ಚಕರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ವತಿಯಿಂದ ಕೆ.ಎಲ್.ರಾಹುಲ್ ಅವರನ್ನು ಗೌರವಿಸಲಾಯಿತು. ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಜಯಕುಮಾರ್ ಹಾಗೂ ಅರ್ಚಕ ಸುರೇಶ್ ಭಟ್ ಉಪಸ್ಥಿತರಿದ್ದರು.

ಬೆಂಗಳೂರು-ಅಯೋಧ್ಯೆ ಸಂಪರ್ಕಿಸುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಿಗೆ ಚಾಲನೆ

ನವದೆಹಲಿ: ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಪೂರ್ವಭಾವಿಯಾಗಿ, ಅಯೋಧ್ಯೆಯಿಂದ ಬೆಂಗಳೂರಿಗೆ ಮತ್ತು ಅಯೋಧ್ಯೆಯಿಂದ ಕೋಲ್ಕತ್ತಾಕ್ಕೆ ಸಂಪರ್ಕಿಸುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಚಾಲನೆ ನೀಡಿದರು. ಲಕ್ನೋದಲ್ಲಿ ಉಪಸ್ಥಿತದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೋಲ್ಕತ್ತಾದಿಂದ ಅಯೋಧ್ಯೆ ಮಾರ್ಗದ ಉದ್ಘಾಟನಾ ವಿಮಾನದ ಬೋರ್ಡಿಂಗ್ ಪಾಸ್ ಸ್ವೀಕರಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಅವರು, ಹೊಸ ದೇಶೀಯ ವಿಮಾನ ನಿಲ್ದಾಣಗಳ ಜೊತೆಗೆ ನಾಲ್ಕು ಅಂತರಾಷ್ಟ್ರೀಯ ವಿಮಾನ […]