ಉಡುಪಿ: ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಂದು ತಮ್ಮ ಹಿರಿಯರ ಮನೆಯಾದ ಅಲೆವೂರು ದೊಡ್ಡಮನೆ ನಾಗ ಬ್ರಹ್ಮಸ್ಥಾನದಲ್ಲಿ ನಡೆದ ಷಷ್ಠಿ ಮಹೋತ್ಸವದ ಪೂಜೆಯಲ್ಲಿ ಭಾಗವಹಿಸಿದರು.
ಷಷ್ಠಿಯ ಹಿನ್ನೆಲೆಯಲ್ಲಿ ಕುಟುಂಬದ ಮನೆಯಲ್ಲಿ ಪ್ರತೀ ವರ್ಷ ನಾಗ ದೇವರಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಅದರಂತೆ ಇಂದು ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಕುಟುಂಬ ಸಮೇತರಾಗಿ ಪಾಲ್ಗೊಂಡರು.
ನಾಗ ಬನ ಸಮೀಪ ನೆಲದಲ್ಲಿ ಕುಳಿತು ಷಷ್ಠಿಯ ವಿಶೇಷ ಭೋಜನ ಮಾಡುವ ಸಂಪ್ರದಾಯವಿದ್ದು, ಅವರು ಕೂಡ ಕುಟುಂಬದವರ ಜೊತೆ ನೆಲದಲ್ಲಿ ಕೂತು ಊಟ ಮಾಡಿದರು.
ಚಾರ್ಲಿ 777 ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಇದ್ದು, ಬ್ಯುಸಿ ಶೆಡ್ಯೂಲ್ ನಡುವೆಯೇ ಕುಟುಂಬದ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಭಾಗಿಯಾದರು. ಮಕ್ಕಳ ಜೊತೆ ಫೋಟೋಗೆ ಪೋಸ್ ಕೊಟ್ಟರು.ಇದೇ ಸಂದರ್ಭದಲ್ಲಿ ಬೂಡಾ ಶೀರ ತುಳುಚಲನಚಿತ್ರದ ಪೂಸ್ಟರ್ ಬಿಡುಗಡೆಗೊಳಿಸಲಾಯಿತು.
ಚಲನಚಿತ್ರ ದ ನಿರ್ದೇಶಕ, ನಿರ್ಮಾಪಕ ದಿಕ್ಸನ್ ಜೆಡಿ, ನಟಿ ರೊಲೆಂಡ್ ಅಲಿಶಾ, ಸಹ ನಿರ್ದೇಶಕ ಅದಿತ್ಯರಾಜ್, ಕಲಾವಿದರಾದ ಶಮಿತ ಸಾಲಿಯಾನ್ ಮುಂತಾದವರು ಉಪಸ್ಥಿತರಿದ್ದರು.