ಆ.15 ರಂದು ರಾಖಿ ಹಬ್ಬ: ಪ್ರಧಾನಿ ಮೋದಿಗೆ ‘ರಾಖಿ’ ಕಳುಹಿಸಿದ ಮುಸ್ಲಿಂ ಮಹಿಳೆಯರು

ವಾರಾಣಸಿ: ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೆ ತರುವ ಮೂಲಕ ಪ್ರಧಾನಿ ಮೋದಿ ಮುಸ್ಲಿಂ ಸಮುದಾಯದ ಮಹಿಳೆಯರ ಗೌರವಕ್ಕೆ ಪಾತ್ರರಾಗಿದ್ದಾರೆ. ದೇಶದಲ್ಲಿ ತ್ರಿವಳಿ ತಲಾಖ್’ನ್ನು ನಿಷೇಧಿಸುವ ಮೂಲಕ ಮುಸ್ಲಿಂ ಹೆಣ್ಣುಮಕ್ಕಳ ಮೇಲಾಗುತ್ತಿದ್ದ ಐತಿಹಾಸಿಕ ಅನ್ಯಾಯವನ್ನು ಪ್ರಧಾನಿ ಮೋದಿ ಸರ್ಕಾರ ಸರಿಪಡಿಸಿದೆ.

ಇದೇ ಆ.15 ರಂದು ದೇಶಾದ್ಯಂತ ರಾಖಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಾಣಸಿಯಲ್ಲಿ ನರೇಂದ್ರ ಮೋದಿ ಭಾವಚಿತ್ರ ಇರುವ ರಾಖಿ ತಯಾರಿಸಿರುವ ಮುಸ್ಲಿಂ ಸಹೋದರಿಯರು, ಅದನ್ನು ಮೋದಿ ಕಚೇರಿಗೆ ಕಳುಹಿಸುವುದರ ಮೂಲಕ ತಮ್ಮ ಹಿರಿಯಣ್ಣನಿಗೆ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ.