ಮಂಗಳೂರು: ರಾಜ್ಯದಲ್ಲಿ ಆಗಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ನೇರ ಹೊಣೆ ಎಂದು ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಆರೋಪಿಸಿದ್ದಾರೆ. ಈ ಕುರಿತು ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಕೇಂದ್ರದ ನಾಯಕರು ಆಪರೇಷನ್ ಕಮಲಕ್ಕೆ ಪ್ಲಾನ್ ನಡೆಸುತ್ತಿದ್ದಾರೆ. ಸತತ ಆರು ಬಾರಿ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿ ಹೊರಟಿದೆ. ಆದ್ರೆ ಈ ಬಾರಿಯೂ ನಮ್ಮ ಸಮ್ಮಿಶ್ರ ಸರ್ಕಾರವನ್ನ ಕೆಡವಲು ಸಾಧ್ಯವಿಲ್ಲ ಎಂದರು.
ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯು ಪ್ರಯತ್ನ ಮಾಡ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಳೆ ಅಂತಾ ಐವನ್ ಆರೋಪಿಸಿದ ಅವರು, ಬಿಜೆಪಿಯ ನೈಜಗುಣ ಶಾಸಕರನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗುವಾಗ ಗೊತ್ತಾಗಿದೆ. ಹಾಗಾಗಿ ರಾಜ್ಯದಲ್ಲಿ ಲ್ಯಾಂಡ್ ಮಾರ್ಕ್ ಜಡ್ಜ್ ಮೆಂಟ್‌ನ್ನು ಸ್ಪೀಕರ್ ಅವ್ರು ಕೊಡಬೇಕು. ಈ ಮೂಲಕ ಬಿಜೆಪಿಯ ನೈಜ ಬಣ್ಷವನ್ನು ಕರ್ನಾಟಕದ ಮೂಲಕ ತೋರಿಸಿಕೊಡಬೇಕು. ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಹೋರಾಟ ಮಾಡ್ತೇವೆ. ನಮಗೆ ವಿಶ್ವಾಸವಿದೆ ನಮ್ಮ ಶಾಸಕರು ರಾಜೀನಾಮೆಯನ್ನು ಹಿಂಪಡೆಯುತ್ತಾರೆ. ಸಿಎಂ ಕುಮಾರ ಸ್ವಾಮಿ ಅವರು ವಿಶ್ವಾಸಮತಯಾಚನೆಯಲ್ಲಿ ಸಫಲರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.