ಭಾರತ್ ಗೌರವ್ ಯೋಜನೆ: ಕೊಯಮತ್ತೂರಿನಿಂದ ಶಿರಡಿಗೆ ಪ್ರಯಾಣ ಬೆಳೆಸಿದೆ ದೇಶದ ಮೊದಲನೆ ಖಾಸಗಿ ರೈಲು

ನವದೆಹಲಿ: ಭಾರತೀಯ ರೈಲ್ವೆಯ ದಕ್ಷಿಣ ರೈಲ್ವೇ ವಲಯವು ತಮಿಳುನಾಡಿನ ಕೊಯಮತ್ತೂರಿನಿಂದ ಮಹಾರಾಷ್ಟ್ರದ ಶಿರಡಿಗೆ ಖಾಸಗಿಯಾಗಿ ನಡೆಸುವ ‘ಭಾರತ್ ಗೌರವ್’ ರೈಲುಗಳ ಮೊದಲ ಸೇವೆಯನ್ನು ಪ್ರಾರಂಭಿಸಿತು.

ಭಾರತ್ ಗೌರವ್ ರೈಲು ಕೊಯಮತ್ತೂರು ಉತ್ತರದಿಂದ 14 ಜೂನ್ ಸಂಜೆ 6 ಗಂಟೆಗೆ ಹೊರಟು ಜೂನ್ 16 ರಂದು ಬೆಳಗ್ಗೆ 07:25 ಗಂಟೆಗೆ ಸಾಯಿನಗರ ಶಿರಡಿಯನ್ನು ತಲುಪುತ್ತದೆ. ತಿರುಪ್ಪೂರ್, ಈರೋಡ್, ಸೇಲಂ, ಯಲಹಂಕ, ಧರ್ಮಾವರಂ, ಮಂತ್ರಾಲಯ ರಸ್ತೆ ಮತ್ತು ವಾಡಿಯಲ್ಲಿ ರೈಲು ನಿಲುಗಡೆಯಾಗಲಿದೆ ಎಂದು ರೈಲ್ವೆ ಸಚಿವಾಲಯವು ಮಂಗಳವಾರ ತಿಳಿಸಿದೆ.

ಮಂಗಳವಾರ ಕೊಯಮತ್ತೂರಿನಿಂದ ಶಿರಡಿಗೆ ಸುಮಾರು 1100 ಪ್ರಯಾಣಿಕರು ಮೊದಲ ಸುತ್ತಿನ ಪ್ರಯಾಣವನ್ನು ಬೆಳೆಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.