ರೈಲ್ವೆ ಯಾತ್ರಿ ಸಂಘದ ವಾರ್ಷಿಕ ಮಹಾಸಭೆ: ಕೇಂದ್ರ ಸಚಿವ ಸುರೇಶ್ ಅಂಗಡಿಯವರಿಗೆ ಶ್ರದ್ಧಾಂಜಲಿ

ಉಡುಪಿ: ಉಡುಪಿ ರೈಲ್ವೆ ಯಾತ್ರಿ ಸಂಘದ 2020-21ನೇ ಸಾಲಿನ ಮಹಾಸಭೆಯು  ಗುರುವಾರ ಉಡುಪಿ ಬಳಕೆದಾರರ ವೇದಿಕೆ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಈಚೆಗೆ ನಿಧನರಾದ ಕೇಂದ್ರ ರೈಲ್ವೆ ರಾಜ್ಯ  ಸಚಿವ ಸುರೇಶ್ ಅಂಗಡಿಯವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಸಲ್ಲಿಸಲಾಯಿತು. ಇತ್ತೀಚೆಗೆ ಅಗಲಿದ ಸಂಘದ ನಿರ್ದೇಶಕ ಸುಂದರ ಕೋಟ್ಯಾನ್ ಅವರಿಗೂ ನುಡಿನಮನ ಸಲ್ಲಿಸಲಾಯಿತು.

ಸಂಘದ ಕಾರ್ಯದರ್ಶಿ ಮಂಜುನಾಥ್  ಮಣಿಪಾಲ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ರಾಮಚಂದ್ರ ಆಚಾರ್ಯ ರವರು ಲೆಕ್ಕಪತ್ರ ವರದಿಯನ್ನು ಮಂಡಿಸಿದರು.

ಉಪಾಧ್ಯಕ್ಷ ಅಜಿತ್ ಶೆಣೈ,  ನಿರ್ದೇಶಕರುಗಳಾದ ಪ್ರಭಾಕರ್ ಆಚಾರ್ಯ, ಶೇಖರ್ ಕೋಟ್ಯಾನ್, ಜಾನ್ ರೆಬೆಲ್ಲೊ, ಜನಾರ್ಧನ್ ಕೋಟ್ಯಾನ್, ಸದಾನಂದ ಅಮೀನ್, ಧೀರಜ್ ಎನ್ ಶಾಂತಿ, ಬಳಕೆದಾರರ ವೇದಿಕೆಯ ದಾಮೋದರ್ ಐತಾಳ್,   ಪದಾಧಿಕಾರಿಗಳು, ಸದಸ್ಯರುಗಳು ಹಾಜರಾಗಿದ್ದರು. ಶೇಖರ್ ಕೋಟ್ಯಾನ್ ಸ್ವಾಗತಿಸಿದರು. ಪ್ರಭಾಕರ್ ಆಚಾರ್ಯ ನಿರೂಪಿಸಿದರು.