ದೆಹಲಿ: ಮಂಗಳವಾರ ವಿದೇಶಿ ನೈಟ್ಕ್ಲಬ್ಗೆ ಭೇಟಿ ನೀಡಿದ ವೀಡಿಯೊ ಕಾಣಿಸಿಕೊಂಡ ನಂತರ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರಾಹುಲ್ ನೈಟ್ ಕ್ಲಬ್ ನಲ್ಲಿರುವ ಈ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟಿನ ಮಧ್ಯೆ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಕರೆತರುವ ಪಕ್ಷದ ಪ್ರಯತ್ನ ವಿಫಲವಾಗಿರುವ ಈ ಸಮಯದಲ್ಲಿ ರಾಹುಲ್ ಪಾರ್ಟಿ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಆದರೆ, ಇದು ರಾಹುಲ್ ಅವರ ರಹಸ್ಯ ಭೇಟಿಯಲ್ಲ, ಅವರು ಒಂದು ಮದುವೆ ಸಮಾರಂಭಕ್ಕಾಗಿ ಕಠ್ಮಂಡುವಿನಲ್ಲಿದ್ದರು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ಮ್ಯಾನ್ಮಾರ್ನಲ್ಲಿ ನೇಪಾಳದ ಮಾಜಿ ರಾಯಭಾರಿಯಾಗಿದ್ದ ಭೀಮ್ ದಾಸ್ ತಮ್ಮ ಮಗಳ ಮದುವೆಗೆ ಹಾಜರಾಗಲು ರಾಹುಲ್ ಗಾಂಧಿಗೆ ಆಹ್ವಾನವನ್ನು ನೀಡಿದ್ದರು ಎಂದು ದಿನಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.
ರಾಹುಲ್ ಗಾಂಧಿಯ ಈ ವೀಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯ ಟಿಪ್ಪಣಿಗಳನ್ನು ಮಾಡುತ್ತಾ, ಕಾಂಗ್ರೆಸ್ ಪಕ್ಷದ ಕಾಲೆಳೆಯುತ್ತಿದ್ದಾರೆ.
Rahul Gandhi was at a nightclub when Mumbai was under seize. He is at a nightclub at a time when his party is exploding. He is consistent.
Interestingly, soon after the Congress refused to outsource their presidency, hit jobs have begun on their Prime Ministerial candidate… pic.twitter.com/dW9t07YkzC
— Amit Malviya (@amitmalviya) May 3, 2022
Regular Parties, Vacations, Holidays, Pleasure Trips, Private Foreign Visits etc are nothing new to the nation now.
As a private citizen there's no issue at all but when an MP, a permanent boss of a national political party who keeps preaching others….. https://t.co/r7bgkmHmvT— Kiren Rijiju (@KirenRijiju) May 3, 2022