ಮಂಗಳೂರು: ದ.ಕ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ವಿಚಾರ ವಿದ್ಯಾರ್ಥಿನಿ ಸ್ನೇಹಿತರ ಜೊತೆ ವಿಶ್ವಾಸದಿಂದ ಹೋಗಿದ್ದ ಸಂದರ್ಭ ಘಟನೆ ನಡೆದಿದೆ. ಸದ್ಯ ವಿದ್ಯಾರ್ಥಿನಿಗೆ ಮಾನಸಿಕವಾಗಿ ಧೈರ್ಯ ತುಂಬಿದ್ದೇವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂದೊಂದು ದಿನ ಆಕೆಯ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವ ವಿಶ್ವಾಸ ನಮಗೆ ಇದೆ. ವಿದ್ಯಾರ್ಥಿನಿ ಶಿಕ್ಷಣವನ್ನು ಬೇರೆ ಜಿಲ್ಲೆಯಲ್ಲಿ ಮುಂದುವರಿಸಲು ಒಪ್ಪಿಕೊಂಡಿದ್ದಾಳೆ. ಆಕೆಯ ಕುಟುಂಬಕ್ಕೆ 4.25 ಲಕ್ಷ ರೂ. ಪರಿಹಾರ ನೀಡಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಹಾರ ನೀಡಲಾಗುವುದು. ಅಲ್ಲದೇ ಆಕೆಯ ಶಿಕ್ಷಣದ ಖರ್ಚು ವೆಚ್ಚ ಇಲಾಖೆ ವತಿಯಿಂದ ನೀಡುತ್ತೇವೆ ಎಂದು ತಿಳಿಸಿದರು.
ಫಟನೆಯ ಅನಂತರ ಮನೆಯವರೂ ಮಾನಸಿಕವಾಗಿ ನೊಂದಿದ್ದಾರೆ. ಅವರಿಗೂ ಧೈರ್ಯ ತುಂಬಿದ್ದೇವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಕಾಲೇಜಿಗೂ ಹೋಗಿ ಮಾಹಿತಿ ಕಲೆ ಹಾಕಿದ್ದೇವೆ. ಈ ಸಂಧರ್ಭ ಹೆಚ್ಚಿನ ವಿಧ್ಯಾರ್ಥಿಗಳು ಪಕ್ಕದ ಅಂಗಡಿಗಳಲ್ಲಿ ಮೊಬೈಲ್ ಇಡುತ್ತಾರೆ ಎಂಬ ಮಾಹಿತಿ ಗೊತ್ತಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕಾಲೇಜ್ ನ ಪಕ್ಕದ ಅಂಗಡಿಗಳನ್ನು ಪರಿಶೀಲನೆ ಮಾಡಲಾಗುವುದು. ಅಲ್ಲದೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪುತ್ತೂರು ಗ್ಯಾಂಗ್ ರೇಪ್ ಪ್ರಕರಣ;
ವಿದ್ಯಾರ್ಥಿನಿಗೆ ಮಾನಸಿಕ ಧೈರ್ಯ ತುಂಬಿದ್ದೇವೆ: ಶ್ಯಾಮಲಾ ಕುಂದರ್