ಜ.19 ರಿಂದ 25ರ ವರೆಗೆ “ಸಪ್ತಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ” ಛಾಯಾಚಿತ್ರ ಪ್ರದರ್ಶನ

ಉಡುಪಿ: ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಗಳ ಚತುರ್ಥ ವಿಶ್ವಗೀತಾ ಪರ್ಯಾಯದ ಅಂಗವಾಗಿ “ಸಪ್ತಸಾಗರದಾಚೆ ಪುತ್ತಿಗೆ ಶ್ರೀಗಳ ದೈವಿಕ ಸಚಿತ್ರ ದಿನಚರಿ” ಛಾಯಾಚಿತ್ರ ಪ್ರದರ್ಶನ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜ. 18 ರಂದು ಉದ್ಘಾಟನೆಗೊಳ್ಳಲಿದೆ.

ಕೊಡವೂರಿನ ಉಡುಪ ರತ್ನ ಪ್ರತಿಷ್ಠಾನದ ಸಹಯೋಗದೊಂದಿಗೆ ಈ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.

ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರು ತಮ್ಮ ಅಮೆರಿಕ ಪ್ರವಾಸದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಕುರಿತು ಸೆರೆಹಿಡಿದ ಛಾಯಾಚಿತ್ರಗಳನ್ನು ಇಲ್ಲಿ ಪ್ರಸ್ತುತ ಪಡಸಲಾಗುತ್ತಿದೆ. ಫಿನಿಕ್ಸ್ ವೆಂಕಟ ಕೃಷ್ಣ ದೇವಸ್ಥಾನದಲ್ಲಿ ಯತಿಗಳ ನಿತ್ಯಪೂಜೆಯನ್ನು ಇಲ್ಲಿ ಛಾಯಾಚಿತ್ರಗಳ ಮೂಲಕ ಸೆರೆ ಹಿಡಿಯಲಾಗಿದ್ದು ಒಟ್ಟು 36 ಚಿತ್ರಗಳ ಪ್ರದರ್ಶನ ಜರಗಲಿದೆ.

ರಿಸ್ಸೋ ಕೊಸೈ ಕಯ್ ಜಪಾನ್, ನಿಯೋಜಿತ ಅಧ್ಯಕ್ಷ ರೆ. ಕೋಶೊ ನಿವಾನೋ,
ಆಸ್ಟ್ರೇಲಿಯಾ, ವಿಕ್ಟೋರಿಯಾದ ಮಾಜಿ ಸಚಿವ ಲ್ಯೂಕ್ ಡನೆಲನ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಸುಶೀಂದ್ರ ತೀರ್ಥ ಶ್ರೀಪಾದರು ಆಶೀರ್ವದಿಸಲಿದ್ದಾರೆ.

ಸಾರ್ವಜನಿಕರು ಜ. 19 ರಿಂದ ಜ. 25ರ ವರೆಗೆ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ.