ಪುತ್ತಿಗೆ ಪರ್ಯಾಯ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದ ಪುತ್ತಿಗೆ ಯತಿದ್ವಯರು

ಉಚ್ಚಿಲ: ಪುತ್ತಿಗೆ ಪರ್ಯಾಯ (Puttige Paryaya) ಪೂರ್ವಾಭಾವಿ ಪ್ರಾಂತ ಸಂಚಾರ ನಿಮಿತ್ತ ಇಲ್ಲಿನ ಐತಿಹಾಸಿಕ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಪುತ್ತಿಗೆ ಶ್ರೀ ಹಾಗೂ ಅವರ ಶಿಷ್ಯ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ಬಳಿಕ ಯತಿದ್ವಯರು ರಾತ್ರಿ ಪೂಜೆ, ತೊಟ್ಟಿಲ ಸೇವೆ, ಅನುಗ್ರಹ ಸಂದೇಶ ನೀಡಿದರು.

ವಿಶ್ವ ಗೀತಾ ಪರ್ಯಾಯಕ್ಕೆ ಆಹ್ವಾನ ನೀಡಿ ಫಲ ಮಂತ್ರಾಕ್ಷತೆ ನೀಡಿದರು.