ಉಡುಪಿ: ಇಲ್ಲಿನ ಕುಕ್ಕಿಕಟ್ಟೆಯ ಪುಣ್ಯಕೋಟಿ ಗೋ ಸೇವಾ ಬಳಗದ 44ನೇ ತಿಂಗಳ ಗೋಪೂಜೆಯು ಪಣಿಯಾಡಿಯ ದೇವಸ್ಥಾನದ ಬಳಿಯಿರುವ ಸಿಂಧು ಪೂಜಾರಿ ಅವರ ಮನೆಯಲ್ಲಿ ಶನಿವಾರ ನಡೆಯಿತು.
ಸಿಂಧು ಪೂಜಾರಿ ಅವರ ಮನೆಯ ಸದಸ್ಯರು ಮತ್ತು ಪುಣ್ಯಕೋಟಿ ಬಳಗದ ಸದಸ್ಯರು ಸೇರಿ ಗೋವಿಗೆ ನವಧಾನ್ಯಗಳನ್ನು ತಿನ್ನಿಸಿ, ಆರತಿ ಬೆಳಗಿ ಗೋಪೂಜೆಯನ್ನು ನೆರವೇರಿಸಿದರು. ನಂತರ ಗೋವುಗಳಿಗೆ ಪಶು ಆಹಾರ ಮತ್ತು ಗೋಪಾಲಕರಿಗೆ ಗೋಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಣಿಯಾಡಿ ನಿವಾಸಿ ಭಾರತಿ ಕೆ.ಎಂ. ಪಣಿಯಾಡಿ ವಾರ್ಡ್ನ ನಗರಸಭಾ ಸದಸ್ಯ ಗಿರೀಶ್ ಅಂಚನ್, ಪುಣ್ಯಕೋಟಿ ಗೋ ಸೇವಾ ಬಳಗದ ಪ್ರಮುಖರಾದ ತಾರಾ ಉಮೇಶ್ ಆಚಾರ್ಯ, ಸರೋಜಾ ಯಶವಂತ್, ಶೋಭಾ ಸಿ. ಶೆಟ್ಟಿ, ಆಶಾ ಶೆಟ್ಟಿ, ರಜನಿ ಆಚಾರ್ಯ, ಅನಿತಾ, ಜಯಶೀಲ, ಶಾಲಿನಿ ನಾಯ್ಕ್, ವಿನುತಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.