ಪ್ರೀತಿಯಿಂದ ಬಾಳುವುದನ್ನು ಕಲಿಯಿರಿ: ರಾಜ ನಿರ್ಮಾಲ್ ನಾಥಜೀ ಸ್ವಾಮೀಜಿ

ಉಡುಪಿ: ಮನುಷ್ಯನ ಬದುಕಿನಲ್ಲಿ ಸುಖ–ದುಃಖ, ಗೆಲುವು–ಸೋಲು ಎಂಬುದು ಆತನ ಕರ್ಮದಿಂದ ಬರುತ್ತದೆ. ಪ್ರತಿಯೊಂದು ಕಾರ್ಯವನ್ನು ಪ್ರೀತಿಯಿಂದ ನಿರ್ವಹಿಸಿದರೆ ಯಶಸ್ಸು ಸಾಧ್ಯವಾಗುತ್ತದೆ. ಬದುಕಿನಲ್ಲಿ ಎಲ್ಲರನ್ನು ಪ್ರೀತಿಸುವುದರೊಂದಿಗೆ ಜೀವಿಸಬೇಕು. ಭಗವಂತ ಪ್ರೀತಿ, ಧ್ಯಾನ, ಭಕ್ತಿಗೆ ಒಲಿಯುತ್ತಾನೆ. ಧಾನ್ಯಕ್ಕಿಂತ ದೊಡ್ಡ ಕಾರ್ಯ ಬೇರೊಂದಿಲ್ಲ ಎಂದು ಕದ್ರಿ ಯೋಗೀಶ್ವರ ಮಠದ ರಾಜ ನಿರ್ಮಾಲ್ ನಾಥಜೀ ಸ್ವಾಮೀಜಿ ಹೇಳಿದರು. ಜೋಗಿ ಸಮಾಜ ಸೇವಾ ಸಮಿತಿ ಉಡುಪಿ-ಕಾರ್ಕಳ ವತಿಯಿಂದ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಸಮಿತಿಯ ದಶಮಾನೋತ್ಸವ ‘ಜೋಗಿ ದಶಮಿ–2019’ ಹಾಗೂ ಜೋಗಿ ವಟುಗಳ […]

ಪುಣ್ಯಕೋಟಿ ಬಳಗದಿಂದ 44ನೇ ಗೋಪೂಜೆ

ಉಡುಪಿ: ಇಲ್ಲಿನ ಕುಕ್ಕಿಕಟ್ಟೆಯ ಪುಣ್ಯಕೋಟಿ ಗೋ ಸೇವಾ ಬಳಗದ 44ನೇ ತಿಂಗಳ ಗೋಪೂಜೆಯು ಪಣಿಯಾಡಿಯ ದೇವಸ್ಥಾನದ ಬಳಿಯಿರುವ ಸಿಂಧು ಪೂಜಾರಿ ಅವರ ಮನೆಯಲ್ಲಿ ಶನಿವಾರ ನಡೆಯಿತು. ಸಿಂಧು ಪೂಜಾರಿ ಅವರ ಮನೆಯ ಸದಸ್ಯರು ಮತ್ತು ಪುಣ್ಯಕೋಟಿ ಬಳಗದ ಸದಸ್ಯರು ಸೇರಿ ಗೋವಿಗೆ ನವಧಾನ್ಯಗಳನ್ನು ತಿನ್ನಿಸಿ, ಆರತಿ ಬೆಳಗಿ ಗೋಪೂಜೆಯನ್ನು ನೆರವೇರಿಸಿದರು. ನಂತರ ಗೋವುಗಳಿಗೆ ಪಶು ಆಹಾರ ಮತ್ತು ಗೋಪಾಲಕರಿಗೆ ಗೋಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಣಿಯಾಡಿ ನಿವಾಸಿ ಭಾರತಿ ಕೆ.ಎಂ. ಪಣಿಯಾಡಿ ವಾರ್ಡ್‌ನ ನಗರಸಭಾ ಸದಸ್ಯ […]

ರೈಲಿನಲ್ಲಿ ಆಕಸ್ಮಿಕ ಬೆಂಕಿ: ಪ್ರಯಾಣಿಕರು ಅಪಾಯದಿಂದ ಪಾರು.

ಬೈಂದೂರು: ಮುಂಬಯಿನಿಂದ ಏರ್ನಾಕುಲಂಗೆ ತೆರಳುತ್ತಿದ್ದ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಬೈಂದೂರು ತಾಲೂಕಿನ ಕಂಬದಕೋಣೆ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಮುಂಬಯಿನಿಂದ ಎರ್ನಾಕುಲಂಕ್ಕೆ ತೆರಳುತ್ತಿರುವ ಮಂಗಳ ಎಕ್ಸ್‌ಪ್ರೆಸ್ (೧೨೬೧೮) ರೈಲಿನ ಬಿ-೪ ಎಸಿ ಬೋಗಿಯಲ್ಲಿ, ಎಸಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ, ಅದನ್ನು ದುರಸ್ತಿಪಡಿಸುವಂತೆ ಪ್ರಯಾಣಿಕರೊಬ್ಬರು ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ತಕ್ಷಣ ಆಗಮಿಸಿದ ತಂತ್ರಜ್ಞರು ಅದನ್ನು ದುರಸ್ತಿ ಮಾಡಿ ತೆರಳಿದ್ದರು ಎನ್ನಲಾಗಿದೆ. ತಡರಾತ್ರಿ ೧.೨೦ರ ಸುಮಾರಿಗೆ ರೈಲು ಬಿಜೂರು ರೈಲ್ವೆ ನಿಲ್ದಾಣದಿಂದ […]