ಉಡುಪಿ: ಶತಮಾನಗಳ ಇತಿಹಾಸವಿರುವ ಪೆರ್ಡೂರಿನ ಶ್ರೀ ಅನಂತಪದ್ಮನಾಭ ದೇವಸ್ಥಾನ ಸಮಗ್ರ ಜೀರ್ಣೋದ್ದಾರ ಆಗಬೇಕು ಎಂಬ ಎಲ್ಲರ ಕನಸು ನನಸಾಗುವ ಸಮಯ ಬಂದಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಿ ಯಶಸ್ವಿಗೊಳಿಸೋಣ ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಾಂತಾರಾಮ ಸೂಡ ಕೆ. ಹೇಳಿದರು.
ಇತಿಹಾಸ ಪ್ರಸಿದ್ಧ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇಗುಲದ ಶ್ರೀ ಸಮಗ್ರ ಜೀರ್ಣೋದ್ಧಾರದ ಬಗ್ಗೆ ಮೇ 3ರಂದು ನಡೆದ ಸಾರ್ವಜನಿಕ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪದ್ಮನಾಭನ ಕೃಪೆಗೆ ಪಾತ್ರರಾಗೋಣ: ಕುಮಾರ ಗುರು ತಂತ್ರಿ
ಕ್ಷೇತ್ರದ ತಂತ್ರಿಗಳಾದ ಕುಮಾರ ಗುರು ತಂತ್ರಿ ಅವರು ಮಾತನಾಡಿ, ಇತಿಹಾಸ ಪ್ರಸಿದ್ಧ ಪೆರ್ಡೂರು ಶ್ರೀ ಅನಂತ ಪದ್ಮನಾಭನ ಅನಂತ ಪದ್ಮನಾಭನ ದೇಗುಲ ಪೆರ್ಡೂರಿನ ಮೂಲ ಜನರ ಮನೆ ಇದ್ದಂತೆ. ನಮ್ಮ ಮನೆಯ ಕೆಲಸದಲ್ಲಿ ನಾವೆಲ್ಲರೂ ಪಾಲ್ಗೊಂಡು ಮನೆಯ ಯಜಮಾನ ಪದ್ಮನಾಭನ ಕೃಪೆಗೆ ಪಾತ್ರರಾಗೋಣ ಎಂದು ಹೇಳಿದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ ಮಾತ್ರ ನಾಡಿ, ಸಮಗ್ರ ಜೀರ್ಣೋದ್ಧಾರ ಸಂಕಲ್ಪದಲ್ಲಿ ಪದುಮನಾಭನ ಅನುಗ್ರಹ ಇದೆ ಎಂದರು. ಕ್ಷೇತ್ರದ ತಂತ್ರಿಗಳಾದ ವಿಟ್ಟಲ್ ತಂತ್ರಿಗಳಾದ ವಿಟ್ಠಲ್ ತಂತ್ರಿ, ಸುಬ್ರಹ್ಮಣ್ಯ ಭಟ್ ಮಾತನಾಡಿದರು.
ಅನಂತ ಪದ್ಮನಾಭ ದೇಗುಲದ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಕೃಷ್ಣ ಪಿ. ಅಡಿಗ, ಸರತಿ ಅರ್ಚಕ ರಘುಪ್ರಸಾದ್ ಅಡಿಗ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಲಾಲ್ ಪಕ್ಕಾಲು, ದೇಗುಲದ ವ್ಯವಸ್ಥಾಪಕ ಚೆನ್ನಕೇಶವ ಭಟ್, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ದಿನೇಶ್ ಪೂಜಾರಿ, ಸಂತೆಕಟ್ಟೆ ರಾಮದಾಸ್ ನಾಯ್ಕ್, ಲಲಿತಾಂಬಾ ಆನಂದ ಗೌಡ, ರಾಮ ಕುಲಾಲ್, ರಂಜಿತ್ ಪ್ರಭು, ಶಾಂತಾ ಆರ್. ಶೆಟ್ಟಿ, ಜೀರ್ಣೋದ್ದಾರ ಸಮಿತಿಯ ಸದಸ್ಯರಾದ ಶಬರೀಶ್ ಸುವರ್ಣ, ರಮೇಶ ಪೂಜಾರಿ, ಸಂತೋಷ್ ಕುಮಾರ್ ಹೆಗ್ಡೆ ರವೀಂದ್ರ ಭಂಡಿ, ಹರೀಶ್ ಶೆಟ್ಟಿ, ರಮೇಶ್ ಆಚಾರ್ಯ, ವಿಶ್ವಾಸ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ರಾಘವೇಂದ್ರ ನಾಯಕ್, ನರಸಿಂಹ ದೇವಾಡಿಗ, ಶಂಕರ ನಾಯ್ಕ ಪಿ. ಶುಭ ಲಕ್ಷ್ಮಿ ಭಂಡಾರ್ಕರ್, ಸ್ವಾಗತ ಸಮಿತಿಯ ಸಂದೀಪ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ರಾಜ್‌ಕುಮಾರ್ ಶೆಟ್ಟಿ ಸ್ವಾಗತಿಸಿ, ಶ್ರೀಧರ್ ಕೆ. ಶೆಟ್ಟಿ ನಿರೂಪಿಸಿ, ವಂದಿಸಿದರು.

















