ಸೌಜನ್ಯ ಪ್ರಕರಣದ ಮರುತನಿಖೆ ಹೋರಾಟಗಾರ ಬೇಡಿಕೆ: ಗಿರೀಶ್ ಮಟ್ಟೆಣ್ಣನವರ್

ಉಡುಪಿ: ಸೌಜನ್ಯ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ ಆದರೆ ಹೋರಾಟಗಾರರು ಮರುತನಿಖೆಗೆ ಬೇಡಿಕೆ ಇಟ್ಟಿದ್ದಾರೆ. ಮೇಲ್ಮನವಿಯಿಂದ ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಮತ್ತು ಅಪರಾಧಿಗಳಿಗೆ ತಪ್ಪಿಸಿಕೊಳ್ಳಲು ಆವಕಾಶ ನೀಡಿದಂತಾಗುತ್ತದೆ ಎಂದು ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟೆಣ್ಣನವರ್ ಹೇಳಿದರು.

ಶುಕ್ರವಾರ ಮಲ್ಪೆ ಸೀ-ವಾಕ್ ಪ್ರದೇಶದಲ್ಲಿ ಯುವ ಭಾರತ್ ಕರ್ನಾಟಕ ಸಂಟನೆ ವತಿಯಿಂದ ‘ಸೌಜನ್ಯ ನಮ್ಮ ಮಗಳು’ ಜನಾಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಫ್ಐ ಅರ್ ನಲ್ಲಿ ಸಂತೋಷ್ ರಾವ್ ಹೆಸರು ಮಾತ್ರ ಇದೆ. ಜೊತೆಗೆ ಸಿಬಿಐ ನ್ಯಾಯಾಲಯ ಈಗಾಗಲೇ ಆತನನ್ನು ನಿರಪರಾಧಿ ಎಂದು ಘೊಷಿಸಿರುವುದರಿಂದ ಮತ್ತೆ ಆತನ ವಿಚಾರ ನಡೆಯುವ ಸಾಧ್ಯತೆ ಕಡಿಮೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಪೊಲೀಸ್ ಸಾಮೂಹಿಕ ಅತ್ಯಾಚಾರವಾಗಿದೆ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ಮತ್ತೆ ಮೇಲ್ಮನವಿ ಹಾಕಿದರೆ ಮರು ತನಿಖೆಗೆ ಸರ್ಕಾರವೂ ನಿರಾಕರಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ತುಳು ಜಾನಪದ ಚಿಂತಕ ತಮ್ಮಣ್ಣ ಶೆಟ್ಟಿ, ಸೌಜನ್ಯ ತಾಯಿ ಕುಸುಮಾವತಿ ಉಪಸ್ಥಿತರಿದ್ದರು. ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.