ಅ.13: ಬನ್ನಂಜೆ ಬಾಬು ಅಮೀನ್ ಪ್ರಶಸ್ತಿ ಪ್ರದಾನ; ಲೇಖಕಿ ಯಶವಂತಿ‌ ಎಸ್.ಸುವರ್ಣ, ಚಿತ್ರಕಲಾವಿದ ಪಿ.ಎನ್. ಆಚಾರ್ಯ‌ ಆಯ್ಕೆ

ಉಡುಪಿ: ಯುವವಾಹಿನಿ ಉಡುಪಿ ಘಟಕದ ವತಿಯಿಂದ ಕೊಡಲ್ಪಡುವ ಬನ್ನಂಜೆ ಬಾಬು ಅಮೀನ್‌ ಜಾನಪದ ವಿದ್ವಾಂಸ ಪ್ರಶಸ್ತಿಗೆ ಹಿರಿಯ ಲೇಖಕಿ ಯಶವಂತಿ ಎಸ್‌. ಸುವರ್ಣ ನಕ್ರೆ ಹಾಗೂ ಜಾನಪದ ಕಲಾವಿದ ಪ್ರಶಸ್ತಿಗೆ ಚಿತ್ರಕಲಾವಿದ ಪಿ.ಎನ್‌. ಆಚಾರ್ಯ ಪುತ್ತೂರು ಅವರು ಆಯ್ಕೆಯಾಗಿದ್ದು, ಅ. 13ರಂದು ಸಂಜೆ 5 ಗಂಟೆಗೆ ಬಲಾಯಿಪಾದೆ ನಾಗಪ್ಪ ಕಾಂಪ್ಲೆಕ್ಸ್‌ನಲ್ಲಿರುವ ಯುವವಾಹಿನಿ ಸಭಾಭವನದಲ್ಲಿ ಪ್ರಶಸ್ತಿ‌ ಪ್ರದಾನ ಸಮಾರಂಭ ನಡೆಯಲಿದೆ ಎಂದು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎರಡು ಪ್ರಶಸ್ತಿ ತಲಾ 10 […]

ವಂದೇ ಮಾತರಂ‌: ವೀಡಿಯೋ ಹಾಡು ಮೂಲಕ ಪ್ಲಾಸ್ಟಿಕ್ ದುಷ್ಪರಿಣಾಮ: ಸ್ವಚ್ಛತೆಯ‌ ಅರಿವು  

ಉಡುಪಿ: ಪ್ಲಾಸ್ಟಿಕ್‌ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮ ಹಾಗೂ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ ಹಾಗೂ ಲೈಫ್‌ ಲೈಕ್‌ ಪ್ರೊಡಕ್ಷನ್‌ ಜಂಟಿಯಾಗಿ ‘ವಂದೇ ಮಾತರಂ’ ವಿಡಿಯೋ ಹಾಡೊಂದನ್ನು ತಯಾರಿಸಿದ್ದು, ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಭೂದೇವಿ ಪ್ಲಾಸ್ಟಿಕ್‌ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ಕಥಾ ಹಂದರವನ್ನು ಇಟ್ಟುಕೊಂಡು ಹಾಡನ್ನು ಚಿತ್ರಕರಿಸಲಾಗಿದ್ದು, ಇದಕ್ಕೆ ವಂದೇ ಮಾತರಂ ಹಾಡನ್ನು ಬಳಸಿಕೊಳ್ಳಲಾಗಿದೆ. 3.4 ನಿಮಿಷ ಅವಧಿಯ ಈ ಹಾಡಿನಲ್ಲಿ ಭೂಮಿ ಕಾಯುವ […]

ಶ್ರೀ ಕೃಷ್ಣ ಮಠದಲ್ಲಿ ” ಶ್ರೀ ಕೃಷ್ಣನಿಗೆ ಓಲೆ ಬರೆಯುತ್ತಿರುವ ರುಕ್ಮಿಣೀ ” ಅಲಂಕಾರ

ಉಡುಪಿ:  ಶ್ರೀ ಕೃಷ್ಣ ಮಠದಲ್ಲಿ, ಸೋದೆ ಮಠದ  ಶ್ರೀ ಶ್ರೀ ವಿಶ್ವವಲ್ಲಭತೀರ್ಥರು  ನವರಾತ್ರಿಯ ಪ್ರಯುಕ್ತ  ಶ್ರೀ ಕೃಷ್ಣ ದೇವರಿಗೆ ” ಶ್ರೀ ಕೃಷ್ಣನಿಗೆ ಓಲೆ ಬರೆಯುತ್ತಿರುವ ರುಕ್ಮಿಣೀ ” ಅಲಂಕಾರ ಮಾಡಿದರು. ಲಕ್ಷ ತುಳಸಿ ಅರ್ಚನೆ ಮಾಡಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು.

ಶ್ರೀ ಕೃಷ್ಣ ಮಠದಲ್ಲಿ ಯೋಗ-ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ  ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು  ಶ್ರೀ ಬಾಬಾ ರಾಮ್ ದೇವರವರ ನವೆಂಬರ್ 16 -20 ರ ತನಕ ನಡೆಯುವ ಉಚಿತ ಬ್ರಹತ್ ಯೋಗ ಶಿಬಿರದ ಪ್ರಯುಕ್ತ  101 ಯೋಗ ಶಿಬಿರಕ್ಕೆ ಹಾಗೂ ಸ್ವಚ್ಛಭಾರತ್ ಅಭಿಯಾನಕ್ಕೆ  ಚಾಲನೆ ನೀಡಿದರು. ಪತಂಜಲಿ ರಾಜ್ಯ ಪ್ರಭಾರಿ ಯೋಗಾಚಾರ್ಯ ಭವರ್ಲಾಲ್ ಆರ್ಯಜೀ,ಬಾಲಾಜಿ ರಾಘವೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಅ 5 ರಂದು ಪರ್ಯಾಯ ಮಹೋತ್ಸವದ  ಪೂರ್ವಭಾವಿ ಸಮಾಲೋಚನಾ ಸಭೆ

ಉಡುಪಿ: ಭಾವಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಹೋತ್ಸವವನ್ನು ವೈಶಿಷ್ಟ್ಯ ಪೂರ್ಣ ಹಾಗೂ ಪರಿಸರ ಪೂರಕವಾಗಿ ನಡೆಸುವ ಸಲುವಾಗಿ ಪೂರ್ವಭಾವಿ ಸಮಾಲೋಚನಾ ಸಭೆಯು  ಅ 5 ರಂದು ಸಾಯಂಕಾಲ 4.30 ಗಂಟೆಗೆ  ಉಡುಪಿಯ ಪೂರ್ಣಪ್ರಜ್ಞಾ ಆಡಿಟೋರಿಯಂನ ಮಿನಿ ಹಾಲಿನಲ್ಲಿ  ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಅದಮಾರು ಕಿರಿಯ  ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ಸಭೆಗೆ ಮಠದ ಶಿಷ್ಯರು,ಅಭಿಮಾನಿಗಳು,ಭಕ್ತಾಭಿಮಾನಿಗಳು ಆಗಮಿಸಿ ತಮ್ಮ ಸೂಕ್ತ ಸಲಹೆ ಸೂಚನೆಯನ್ನು ನೀಡಿ ಪರ್ಯಾಯೋತ್ಸವ […]