ಉಡುಪಿ: ಕರಾವಳಿಯ ಜನಪ್ರಿಯ ಸುದ್ದಿ ಜಾಲತಾಣ ಉಡುಪಿXPRESS ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ಅಮ್ಮ with ಕಂದಮ್ಮ ಫೋಟೋ ಸ್ಪರ್ಧೆ 2020 ಸೀಸನ್-2 ಇದರ ಬಹುಮಾನ ವಿತರಣಾ ಕಾರ್ಯಕ್ರಮ ಇಂದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನ ಉಡುಪಿ ಶೋರೂಂ ನಲ್ಲಿ ನೆರವೇರಿತು.
ಉಡುಪಿ ಬಡಗುಬೆಟ್ಟು ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯೆ ಡಾ. ಸುನೀತಾ ಶೆಟ್ಟಿ ಅವರು ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಶುಭಹಾರೈಸಿದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಉಡುಪಿ ವಿಭಾಗದ ಮುಖ್ಯಸ್ಥ ಹಫೀಜ್ ರೆಹಮಾನ್, ಮ್ಯಾನೇಜರ್ ರಾಘವೇಂದ್ರ ನಾಯಕ್ , ಉಡುಪಿXPRESS ವ್ಯವಸ್ಥಾಪಕ ಸಂಪಾದಕ ಜೀವೇಂದ್ರ ಶೆಟ್ಟಿ,ಸಂಪಾದಕರಾದ ಪ್ರಸಾದ್ ಶೆಣೈ, ಮಾರ್ಕೆಟಿಂಗ್ ವಿಭಾಗದ ಸ್ವರೂಪ್, ಅಶೋಕ್ ಆಚಾರ್ಯ ಉಪಸ್ಥಿತರಿದ್ದರು. ಉಪನ್ಯಾಸಕಿ ಭಾಗ್ಯಶ್ರೀ ಐತಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿಜೇತರು
ಫೇಸ್ಬುಕ್ ಲೈಕ್ ಆಧಾರಿತ ವಿಭಾಗದಲ್ಲಿ ಅಮ್ಮ-ಮಗಳಾದ ಹರ್ಷಿತಾ, ಮಾನ್ವಿ, ಪಾವಂಜೆ ಪ್ರಥಮ, ಹಿರೇಬೆಟ್ಟುವಿನ ಸುಷ್ಮಾ, ಶಯನ್ ದ್ವಿತೀಯ ಹಾಗೂ ಹೊಸಪೇಟೆಯ ಹೇಮಾ ಕೆ, ಬೃಂದನ್ ಬಿ ತೃತೀಯ ಬಹುಮಾನ ಪಡೆದಿದ್ದಾರೆ.
ತೀರ್ಪುಗಾರರ ಆಯ್ಕೆ ವಿಭಾಗ:
ತೀರ್ಪುಗಾರರ ಆಯ್ಕೆ ವಿಭಾಗದಲ್ಲಿ ಬ್ರಹ್ಮಾವರದ ಸಹನಾ ನಾಯಕ್, ಆಶ್ವಿ ಎಸ್, ಪ್ರಥಮ, ಉಡುಪಿಯ ಪ್ರಜ್ವಲೀ ಎಸ್ ಭಟ್, ಹಿರಣ್ಮಯೀ ಭಟ್ ದ್ವಿತೀಯ ಬಹುಮಾನ ಹಾಗೂ ಕಾರ್ಕಳದ ನಿಶ್ಮಿತಾ ನಾಯಕ್, ಜಾನವ್ ನಾಯಕ್ ತೃತೀಯ ಬಹುಮಾನ ಪಡೆದಿದ್ದಾರೆ.
ಈ ವರ್ಷ ಉಡುಪಿXpress “ಅಮ್ಮ with ಕಂದಮ್ಮ” ಫೋಟೋ ಸ್ಪರ್ಧೆಗೆ ಸುಮಾರು 410 ಫೋಟೋಗಳು ಬಂದಿದ್ದವು.
ಅಮ್ಮwith ಕಂದಮ್ಮ ಸ್ಪರ್ಧೆಯ ಪ್ರಾಯೋಜಕರಾಗಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್,ಬೇಕ್ ಸ್ಟುಡಿಯೋ ಉಡುಪಿ, ಸುರತ್ಕಲ್ ನ ghat -exotic spices,ಕಾರ್ಕಳದ ಶಿವಾ ಸ್ಮರಣಿಕಾ, mother care ,denim hut -premium men’s wear ಇವರು ಸಹಕರಿಸಿದ್ದಾರೆ