ಕಣ್ ಹೊಡೆದು ಎಲ್ಲಾ ಪಡ್ಡೆಗಳ ಕಣ್ಣಂಚಿನ ಚೆಲುವೆಯಾಗಿ ಸಖತ್ ಸದ್ದು ಮಾಡಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಕುರಿತು ನಿಮಗೆ ಹೆಚ್ಚೇನು ಹೇಳಬೇಕಿಲ್ಲ ಬಿಡಿ. ಒರು ಆಡಾರ್ ಲವ್ ಚಿತ್ರದ ಸಣ್ಣ ದೃಶ್ಯದಿಂದ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಬದುಕೇ ಬದಲಾಗಿತ್ತು. ಈಗ ಅದೇ ವಾರಿಯರ್ “ಲವ್ ಹ್ಯಾಕರ್ಸ್” ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಸಿನಿಮಾ ಸೈಬರ್ ಕ್ರೈಮ್ ಕುರಿತಾದ ಸಿನಿಮಾ. ಸಖತ್ ಥ್ರಿಲ್ಲಾಗಿರುವ ದೃಶ್ಯಗಳು ಚಿತ್ರದಲ್ಲಿದೆಯಂತೆ. ಚಿತ್ರದಲ್ಲಿ ಪ್ರಿಯಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಸೈಬರ್ ಸುಳಿಯಲ್ಲಿ ಸಿಲುಕಿಕೊಳ್ಳುವ ಯುವತಿ ಅದರಿಂದ ಹೇಗೆ ಆಚೆಗೆ ಬರುತ್ತಾಳೆ ಎನ್ನುವುದು ಚಿತ್ರದ ತಿರುಳು. ಚಿತ್ರಕ್ಕೆ ಮಯಾಂಕ್ ಆಕ್ಷನ್ ಕಟ್ ಇದೆ.