ಯಾವುದೇ ಊರಿನ ಹುಡುಗಿಯಾಗಲಿ, ಮದುವೆಯ ಸಂದರ್ಭದಲ್ಲಿ ಒಂದೂರನ್ನು ಬಿಟ್ಟು ಗಂಡನ ಊರನ್ನು ಹಿಡಿಯುವ ಪ್ರಸಂಗ ಬರುತ್ತದೆ.ತಾವು ಹುಟ್ಟಿ ಬೆಳೆದ, ಆಟವಾಡಿ ಸಂಭ್ರಮಪಟ್ಟ,ಮೋಜು ಮಸ್ತಿ ಮಾಡಿದ ಊರನ್ನು ಬಿಟ್ಟು ಮತ್ತೊಂದು ಊರಿನ ದಾರಿ ಹಿಡಿಯುವಾಗ ಆಗುವ ನೋವು, ಬೇಸರ ವರ್ಣಿಸಲು ಸಾಧ್ಯವಿಲ್ಲ.
ಇಲ್ಲೊಂದು ಎಮೋಷನಲ್ ವಿಡಿಯೋ ಇದೆ ನೋಡಿ. ಈ ವಿಡಿಯೋದಲ್ಲಿ ಮದುವೆಯಾಗುವ ಹುಡುಗಿ ತಾನು ಹುಟ್ಟಿ ಬೆಳೆದ ಮಂಗಳೂರನ್ನು ಬಿಟ್ಟು ಬೇರೆ ಊರಿಗೆ ಹೋಗುವ ಮೊದಲು, ತನ್ನನ್ನು ಬೆಳೆಸಿದ ಮಂಗಳೂರು ಹೇಗಿತ್ತು? ಮಂಗಳೂರು ತನ್ನ ಬದುಕಿಗೆ ಏನೇನೆಲ್ಲ ಕೊಟ್ಟಿತ್ತು? ಮಂಗಳೂರು ತನ್ನನ್ನು ಹೇಗೆಲ್ಲಾ ಬೆಳೆಸಿತ್ತು, ಬದುಕಿಗೆ ಎಷ್ಟೊಂದೆಲ್ಲಾ ಖುಷಿ ಕೊಟ್ಟಿತ್ತು ಎನ್ನುವುದನ್ನು ವಿಭಿನ್ನ ಫೋಟೋಗಳೊಂದಿಗೆ ತುಂಬಾ ಎಮೋಷನಲ್ ಆಗಿ ನಿರೂಪಿಸುತ್ತಾ ಹೋಗುತ್ತಾಳೆ. ಈ ವಿಡಿಯೋ ನೋಡ್ತಾ ನೋಡ್ತಾ ನಿಮಗೆ ಕುಡ್ಲವೂ, ಕುಡ್ಲ ಅನ್ನೋ ಬೆರಗಿನ ಊರಿನ ಚಿತ್ರಗಳೂ ಭಾವನಾತ್ಮಕವಾಗಿ ಕಾಡುತ್ತ ಹೋಗುತ್ತದೆ. ಮದ್ವೆಯಾಗಿ ಮಂಗಳೂರು ಬಿಟ್ಟು ಗಂಡನ ಮನೆಗೆ ಹೋಗುವ,ಇನ್ನೇನು ಹೋಗಲಿರುವ ಪ್ರತೀ ಹೆಣ್ಣಿನ ಮನಸ್ಸಿಗೂ ಈ ವಿಡಿಯೋ ಲಿಂಕ್ ಆಗುತ್ತದೆ.
ಅಂದಹಾಗೆ ಈ ವಿಭಿನ್ನ ಚಿತ್ರಿಕೆಯನ್ನು ನಿರ್ದೇಶಿಸಿ,ಮಾಡೆಲ್ ಆಗಿ ಅಭಿನಯಿಸಿದವರು ಮಂಗಳೂರು ಡ್ರೀಮ್ ಕ್ಯಾಚರ್ಸ್ ಇವೆಂಟ್ಸ್ ನ ಸಂಸ್ಥಾಪಕಿ ಪೃಥ್ವಿ ಗಣೇಶ್ ಕಾಮತ್. ಈ ವಿಭಿನ್ನ ಪರಿಕಲ್ಪನೆಯೂ ಪೃಥ್ವಿ ಗಣೇಶ್ ಕಾಮತ್ ಅವರದ್ದು.
ಕಂಟೆಂಟ್ ಮತ್ತು ಸ್ವರ ನೀಡಿದ್ದು ಆಂಡ್ರಿಯಾ ಹರೀಶ್, ಫೋಟೋಗ್ರಫಿ ಮಾಡಿದ್ದು ಸಂತೋಷ್ ಗೋಲ್ಡ್. ಮೇಕಪ್ ನಲ್ಲಿ ಚೇತನಾ ಬ್ಯೂಟಿ ಲೌಂಜ್ ಅಕಾಡೆಮಿಯ ಚೇತನಾ ಎಸ್, ಎಡಿಟಿಂಗ್ ನಲ್ಲಿ ರೌಲ್ ಪಂಡಿತ್ ಅವರ ಶ್ರಮವಿದೆ. ಕಾಸ್ಟ್ಯೂಮ್ ಪಾರ್ಟ್ನರ್ ಆಗಿ ವಸ್ತ್ರಂ ಮಂಗಳೂರು ಮತ್ತು ಅಟೈರ್ ಪಾರ್ಟ್ನರ್ ಆಗಿ ಕಾಸ್ಟ್ಯೂಮ್ ಕಾಟೇಜ್ ಮಂಗಳೂರು ಇದರ ಸುಜಾತಾ ಕೋಟ್ಯಾನ್ ಮೊದಲಾದವರ ಶ್ರಮ ಈ ವಿಡಿಯೋಗಿದೆ.
ಜಸ್ಟ್ ನೀವೊಮ್ಮೆ ಈ ವಿಡಿಯೋ ನೋಡಿ, ನಿಮಗೂ ಕುಡ್ಲ ಕಾಡಬಹುದು.
https://www.facebook.com/699971528/videos/10157124583821529/