ಅಂಬಲಪಾಡಿ ಜಂಕ್ಷನ್ ಬಳಿ ಸರಣಿ ಅಪಘಾತ: ಹಲವರಿಗೆ ಗಾಯ

ಉಡುಪಿ : ಇಲ್ಲಿನ ಅಂಬಲಪಾಡಿ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಭಿನಂದನಾ ಪೆಟ್ರೋಲ್ ಬಂಕ್ ಎದುರು ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ ಆದರೂ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗುರುವಾರ ಸರಕು ತುಂಬಿದ ಲಾರಿ ಹಾಗೂ 3 ಪ್ರಯಾಣಿಕರ ಕಾರುಗಳ ನಡುವೆ ಈ ಅಪಘಾತ ಸಂಭವಿಸಿದ್ದು, ಕಾರುಗಳಲ್ಲಿದ್ದ ಈರ್ವರು ಮಹಿಳೆಯರು, ಓರ್ವ ಗಂಡಸು ಹಾಗೂ ಒಂದು ಮಗು ಗಾಯಗೊಂಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಸಾರ್ವಜನಿಕರ ಸಹಕಾರದೊಡನೆ ಗಾಯಾಳುಗಳನ್ನು […]

ಜ. 8 ರಂದು ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ವಾರ್ಷಿಕ ಸಮಾರಂಭ

ಉಡುಪಿ: ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಉಡುಪಿ ಜಿಲ್ಲೆ ಇವರ ವತಿಯಿಂದ ವಾರ್ಷಿಕ ಸಮಾರಂಭ, ನೂತನ ವರ್ಷದ ಡೈರಿ ಬಿಡುಗಡೆ, ಸಾರ್ವಜನಿಕ ಸೇವೆ ಸಲ್ಲಿಸಿದವರಿಗೆ, ರಕ್ತದಾನಿಗಳಿಗೆ ಗೌರವ ಸಮರ್ಪಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಜನವರಿ 8 ರಂದು ಬೆಳಗ್ಗೆ 10 ಗಂಟೆಗೆ ನಗರದ ಕಿದಿಯೂರು ಹೋಟೆಲ್‌ನ ರೂಫ್ ಟಾಪ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾರಾಹಿ ಯೋಜನೆಗಾಗಿ ಮರಗಳ ತೆರವು: ಜ. 16 ರಂದು ಸಾರ್ವಜನಿಕ ಅಹವಾಲು ಸಭೆ

ಕುಂದಾಪುರ: ವಾರಾಹಿ ಏತ ನೀರಾವರಿ ಯೋಜನಾ ಕಾಮಗಾರಿಗೆ ಸಂಬಂಧಿಸಿದಂತೆ, ಕುಂದಾಪುರ ತಾಲೂಕು ಹಾಲಾಡಿ ಗ್ರಾಮದ ಸ.ನಂ. 139 ರಲ್ಲಿ ಕಾಲುವೆ ನಿರ್ಮಾಣಕ್ಕೆ ಅಡಚಣೆಯಾಗುವ ಒಟ್ಟು 343 ಮರಗಳನ್ನು ತೆರವುಗೊಳಿಸುವ ಹಿನ್ನೆಲೆ, ಜನವರಿ 16 ರಂದು ಮಧ್ಯಾಹ್ನ 3 ಗಂಟೆಗೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ. ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಭೆಯಲ್ಲಿ ಹಾಜರಾಗಿ ಅಥವಾ ಸದ್ರಿ ದಿನಾಂಕದ ಒಳಗೆ ವೃಕ್ಷ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ ಇವರಿಗೆ […]

ಹಿಮಾಲಯದ ತಪ್ಪಲಿನ ಉತ್ತರಾಖಂಡದಲ್ಲಿ ಕುಸಿಯುತ್ತಿದೆ ಭೂಮಿ: ನಗರೀಕರಣದಿಂದಾಗಿ ನಲುಗಿತು ಜೀವನ

ಜೋಶಿಮಠ: ಹಿಮಾಲಯದ ತಪ್ಪಲಿನ ಈ ಪಟ್ಟಣವು ಕುಸಿಯುತ್ತಿದೆ. ಇಲ್ಲಿನ ರಸ್ತೆ, ಮನೆ, ಶಾಲೆ ಕಾಲೇಜು, ಕೃಷಿ ಭೂಮಿಯಲ್ಲಿ ಭೂಮಿ ಬಾಯ್ದೆರೆದು ದೊಡ್ಡ ವಿಕೋಪವೊಂದಕ್ಕೆ ನಾಂದಿ ಹಾಡಲು ತಯಾರಾಗಿ ನಿಂತಿದೆ. ಇಲ್ಲಿನ 561 ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸುಮಾರು 66 ಕುಟುಂಬಗಳು ಈ ಜಾಗವನ್ನು ತೊರೆದು ಬೇರೆ ಸುರಕ್ಷಿತ ಸ್ಥಳಕ್ಕೆ ತೆರಳಿದೆ. ಸಿಂಗಧಾರ್ ಮತ್ತು ಮಾರವಾಡಿ ಎಂಬ ಸ್ಥಳಗಳಲ್ಲಿ ಬಿರುಕುಗಳು ಹೆಚ್ಚಾಗುತ್ತಿವೆ. ಮನೆ ಮಾತ್ರವಲ್ಲ ಇಲ್ಲಿನ ರಸ್ತೆಗಳಲ್ಲಿಯೂ ಬಿರುಕುಗಳು ಕಾಣಿಸಿಕೊಂಡಿವೆ. ಜೋಶಿಮಠದ 9 ವಾರ್ಡುಗಳಲ್ಲಿ ಬೃಹತ್ ಪ್ರಮಾಣದ ಪರಿಣಾಮಗಳಾಗಿವೆ. […]

ಕಾರ್ಕಳ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಕಾರ್ಕಳ: ಇಲ್ಲಿನ ಹಿರ್ಗಾನ ಕುಂದೇಶ್ವರ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ಸಂಪತ್ ಭಂಡಾರಿ(30) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಕಾರ್ಕಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.