ಹೈದರಾಬಾದ್ : ಏಳನೇ ತರಗತಿಯಲ್ಲಿರುವಾಗ ಮಕ್ಕಳು ಶಾಲೆಗೆ ಹೋಗುವುದು, ಟ್ಯೂಷ#ನ್ಗೆ ಹೋಗುವುದು, ಮನೆಕೆಲಸ ಮಾಡುವುದು ಮತ್ತು ಸಮಯವಿದ್ದಾಗ ಆಟ ಆಡುವುದು ಸ್ವಾಭಾವಿಕ.ಆದರೆ ಇಲ್ಲೊಬ್ಬಳು ಬಾಲಕಿ ತುಂಬಾ ವಿಭಿನ್ನವಾಗಿದ್ದಾಳೆ. 11 ನೇ ವಯಸ್ಸಿನಲ್ಲಿಯೇ ಈಕೆ ಖಗೋಳ ಶಾಸ್ತ್ರದ ಸಂಶೋಧನೆ ಮಾಡುತ್ತ ಮತ್ತು ಕ್ಷುದ್ರಗ್ರಹಗಳ ಕುರುಹುಗಳನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾಳೆ.
ಬಾಲಕಿಯ ತಾಯಿ ಡಾ. ಚೈತನ್ಯ ಅವರು ವಿಜಯಾ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜಮೆಂಟ್ನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ವಿಜಯ್ ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಸಿದ್ದಿಕ್ಷಾ ಮತ್ತು ಆಕೆಯ ಸಹೋದರಿ ಇಬ್ಬರೂ ಖಗೋಳಶಾಸ್ತ್ರದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ ಮತ್ತು ಕ್ಷುದ್ರಗ್ರಹಗಳನ್ನು ಪತ್ತೆಹಚ್ಚುತ್ತಿದ್ದಾರೆ. ಇದಕ್ಕಾಗಿ ನಾಸಾ ಮತ್ತು ಇಸ್ರೋದಿಂದ ಪ್ರಶಂಸೆ ಪಡೆಯುತ್ತಿದ್ದಾರೆಅಷ್ಟೇ ಅಲ್ಲದೆ ಬಹು ಪ್ರತಿಭೆಗಳ ಆಗರವಾಗಿರುವ ಈ ಬಾಲಕಿ ಐದನೇ ವಯಸ್ಸಿನಿಂದಲೂ ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ನೃತ್ಯದಲ್ಲಿ ಹಲವಾರು ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಸದ್ಯ ಈಕೆ ಇಸ್ರೋ ಮತ್ತು ನಾಸಾದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾಳೆ. ಈ ಪ್ರತಿಭಾವಂತ ಬಾಲಕಿಯ ಹೆಸರು ಪಲ್ಲಂ ಸಿದ್ದಿಕ್ಷಾ. ಈಕೆಗೆ ಈಗ 11 ವರ್ಷ, ಆದರೆ ಆಕೆಯ ಗಮನವೆಲ್ಲ ಬಾಹ್ಯಾಕಾಶ ಸಂಶೋಧನೆಯತ್ತ ನೆಟ್ಟಿದೆ. ಅವಳು ತನ್ನ ಅಕ್ಕನ ಸ್ಫೂರ್ತಿಯಿಂದ ಖಗೋಳ ಸಂಶೋಧನೆ ಆರಂಭಿಸಿ ಅದರಲ್ಲಿ ಯಶಸ್ಸು ಸಾಧಿಸಿದ್ದಾಳೆ. ಈ ಹಿಂದೆ, ಈಕೆ ತನ್ನ ಸಹೋದರಿಯೊಂದಿಗೆ ಸೇರಿ ಕ್ಷುದ್ರಗ್ರಹವೊಂದನ್ನು ಕಂಡು ಹಿಡಿದು ನಾಸಾದಿಂದ ಪ್ರಮಾಣಪತ್ರ ಪಡೆದುಕೊಂಡಿದ್ದಾಳೆ.
.
ಖಗೋಳ ಸಂಶೋಧನೆಯಲ್ಲಿ ಕ್ಷುದ್ರಗ್ರಹಗಳ ಉಪಸ್ಥಿತಿಯನ್ನು ಪತ್ತೆಹಚ್ಚುವಲ್ಲಿ ಸಿದ್ದಿಕ್ಷಾ ಅವರ ಕೆಲಸವನ್ನು ಗುರುತಿಸಿ, ಅಂತಾರಾಷ್ಟ್ರೀಯ ಖಗೋಳ ಸಂಶೋಧನಾ ಸಹಯೋಗ-ಎಐಎಸ್ಸಿ ಟೆಕ್ಸಾಸ್ ಹಾರ್ಡಿನ್-ಸಿಮನ್ಸ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಪ್ರಮಾಣಪತ್ರ ನೀಡಿದೆ. ಸಿದ್ಧಿಕ್ಷಾಳು ಬ್ರಹ್ಮಾಂಡದ ಅನೇಕ ಆಕಾಶಕಾಯಗಳ ಸೃಷ್ಟಿ, ವಿಘಟನೆ, ಅಸ್ತಿತ್ವ, ಗುಣಲಕ್ಷಣಗಳು ಮತ್ತು ನಾಶವನ್ನು ವೈಜ್ಞಾನಿಕವಾಗಿ ವಿವರಿಸುತ್ತಾಳೆ.
ನಾಸಾದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಸ್ವಾತಿಮೋಹನ್ ಅವರು ಸಿದ್ದಿಕ್ಷಾ ಮತ್ತು ಶ್ರೇಯಾ ಅವರ ಸಂಬಂಧಿ. 2010 ರಲ್ಲಿ, ಅವರು ಮಂಗಳಯಾನದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದರು ಮತ್ತು ಮಂಗಳ ಗ್ರಹದಲ್ಲಿ ರೋವರ್ ಯಶಸ್ವಿಯಾಗಿ ಇಳಿದ ನಂತರ ಖ್ಯಾತಿ ಪಡೆದಿದ್ದರು. ಮನೆಯಲ್ಲಿ ಈ ಸ್ವಾತಿ ಮೋಹನ್ ಬಗ್ಗೆ ಪೋಷಕರು ಮಾತನಾಡುತ್ತಿದ್ದುದರಿಂದ ಸ್ಪೂರ್ತಿ ಪಡೆದ ಸಹೋದರಿಯರು ಖಗೋಳಶಾಸ್ತ್ರದ ಬಗ್ಗೆ ಅಧ್ಯಯನ ಆರಂಭಿಸಿದರು.
ಕ್ಷುದ್ರಗ್ರಹ ಜಿಸಿ 103 ಅನ್ವೇಷಿಸಿದ ಸಿದ್ದಿಕ್ಷಾ: ಸಿದ್ಧಿಕ್ಷಾ ತನ್ನ ಹಿರಿಯ ಸಹೋದರಿಯೊಂದಿಗೆ ಕ್ಷುದ್ರಗ್ರಹ ಶೋಧ ಅಭಿಯಾನದಲ್ಲಿ ಭಾಗವಹಿಸಿ ಕ್ಷುದ್ರಗ್ರಹ 2021 ಜಿಸಿ 103 ಅನ್ನು ಕಂಡುಹಿಡಿದಳು ಮತ್ತು ಇದಕ್ಕಾಗಿ 2021 ರಲ್ಲಿ ನಾಸಾದಿಂದ ಪ್ರಮಾಣಪತ್ರ ಪಡೆದುಕೊಂಡಳು. ಕಳೆದ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ನಡೆದ ಕ್ಷುದ್ರಗ್ರಹ ಶೋಧ ಅಭಿಯಾನದಲ್ಲಿ, ಪ್ಯಾನ್ ಸ್ಟಾರ್ಸ್ ದೂರದರ್ಶಕದ ಫೋಟೋಗಳನ್ನು ವಿಶ್ಲೇಷಿಸುವ ಮೂಲಕ ಸಿದ್ಧಿಕ್ಷಾ ಮಂಗಳ ಮತ್ತು ಗುರು ಗ್ರಹಗಳ ನಡುವಿನ ಮುಖ್ಯ ಬೆಲ್ಟ್ನಲ್ಲಿ ಕ್ಷುದ್ರಗ್ರಹವೊಂದನ್ನು ಕಂಡುಹಿಡಿದಳು. 2022 ಎಸ್ ಡಿ 66 ಎಂದು ಹೆಸರಿಸಲಾಗಿದೆ. ಅಕ್ಟೋಬರ್ 30 ರಂದು ಪ್ಯಾರಿಸ್ನಲ್ಲಿ ನಡೆದ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟದಲ್ಲಿ ನಾಸಾದ ವರ್ಲ್ಡ್ ಮೈನರ್ ಬಾಡಿ ಕ್ಯಾಟಲಾಗ್ನಲ್ಲಿ ಈಕೆ ಭಾಗವಹಿಸಿದ್ದಳು.2018 ರಲ್ಲಿ ನಾಸಾ ಆಯೋಜಿಸಿದ್ದ ‘ಸೈಂಟಿಸ್ಟ್ ಫಾರ್ ಡೇ’ ಸ್ಪರ್ಧೆಯಲ್ಲಿ ಸಿದ್ದಿಕ್ಷಾ ಮತ್ತು ಅವರ ಹಿರಿಯ ಸಹೋದರಿ ಶ್ರೀಯಾ ಮೆಚ್ಚುಗೆಯ ಪ್ರಮಾಣಪತ್ರ ಪಡೆದರು. ಆರನೇ ವಯಸ್ಸಿನಲ್ಲಿ, ಸಿದ್ದಿಕ್ಷಾ ತನ್ನ ಹಿರಿಯ ಸಹೋದರಿಯಿಂದ ಪ್ರೇರಿತಳಾಗಿ ಖಗೋಳಶಾಸ್ತ್ರದ ಬಗ್ಗೆ ಉತ್ಸಾಹ ಬೆಳೆಸಿಕೊಂಡಳು. ತನ್ನ ತಾಯಿಯ ಮಾರ್ಗದರ್ಶನದಲ್ಲಿ, ದೆಹಲಿಯ ಸ್ಪೇಸ್ ಸ್ಪೋರ್ಟ್ ಇಂಡಿಯಾ ಫೌಂಡೇಶನ್ನ ಸಂಸ್ಥಾಪಕ ಸಮೀರ್ ಸಚ್ದೇವ್ ಅವರಿಂದ ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ವಿಷಯಗಳ ಬಗ್ಗೆ ತರಬೇತಿ ಪಡೆದಳು. 2020 ರಲ್ಲಿ, ಬಾಲಕಿಯು ‘ಇಂಟರ್ನ್ಯಾಷನಲ್ ಅಬ್ಸರ್ವ್ ದಿ ಮೂನ್ ನೈಟ್ ಸ್ಪರ್ಧೆಯಲ್ಲಿ ಭಾಗವಹಿಸಿ ತನ್ನ ಪ್ರತಿಭೆ ತೋರಿಸಿದಳು.