ನವದೆಹಲಿ: ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಶುಕ್ರವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ “ಪ್ರತ್ಯೇಕ ದೇಶದ ಬೇಡಿಕೆ” ಹೇಳಿಕೆಯನ್ನು ಪ್ರಸ್ತಾಪಿಸಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು, ಕೆಳಮನೆಯಲ್ಲಿ ಮಾತನಾಡಿದ ಜೋಶಿ, ಲೋಕಸಭಾ ಸಂಸದರಾಗಿ ಇದು ಅವರ ಪ್ರಮಾಣ ವಚನದ ಉಲ್ಲಂಘನೆಯಾಗಿದೆ ಎಂದಿದ್ದಾರೆ.
“ನಾನು ಸೋನಿಯಾ ಗಾಂಧಿಯವರಿಂದ ಕ್ಷಮೆಯಾಚನೆ ಮತ್ತು ಕ್ರಮಕ್ಕೆ ಒತ್ತಾಯಿಸುತ್ತೇನೆ. ಇದು ಅವರ (ಸಂಸದರಾಗಿ) ಪ್ರಮಾಣ ವಚನದ ಉಲ್ಲಂಘನೆಯಾಗಿದೆ. ವಿಷಯವನ್ನು ನೈತಿಕ ಸಮಿತಿಗೆ ಕಳುಹಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಕಾಂಗ್ರೆಸ್ ಕ್ರಮ ತೆಗೆದುಕೊಳ್ಳಬೇಕು. ಅವರು ತೆಗೆದುಕೊಳದಿದ್ದರೆ ದೇಶದ ‘ತುಕ್ಡೆ ತುಕ್ಡೆ’ಯಲ್ಲಿ ನೀವೂ ಭಾಗಿಯಾಗಿದ್ದೀರಿ ಎಂದು ದೇಶ ನಂಬುತ್ತದೆ” ಎಂದು ಅವರು ಹೇಳಿದ್ದಾರೆ.
#WATCH | Parliamentary Affairs Minister Pralhad Joshi raised the issue of Congress MP DK Suresh's "…forced to demand a separate country" statement, in Lok Sabha.
— ANI (@ANI) February 2, 2024
He says, "…I demand an apology and action from Sonia Gandhi. This is a violation of his oath (as an MP)…I urge… pic.twitter.com/oTHAEHIJGh
ಕೇಂದ್ರವು ತಮಗೆ ಹಣ ಬಿಡುಗಡೆ ಮಾಡದಿರುವ ಪ್ರವೃತ್ತಿಯನ್ನು ಮುಂದುವರಿಸಿದರೆ ದೇಶದ ದಕ್ಷಿಣ ರಾಜ್ಯಗಳು ಪ್ರತ್ಯೇಕ ದೇಶದ ಬೇಡಿಕೆಯನ್ನು ಎತ್ತುತ್ತವೆ ಎಂದು ಬೆಂಗಳೂರು ಗ್ರಾಮಾಂತರದ ಲೋಕಸಭಾ ಸಂಸದ ಡಿ.ಕೆ ಸುರೇಶ್ ಗುರುವಾರ ಹೇಳಿದ್ದಾರೆ.
ಈ ಹೇಳಿಕೆಯು ದೇಶದ ಅಖಂಡತೆ, ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಏತನ್ಮಧ್ಯೆ ಸಂಸದರ ಈ ಹೇಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ರಾಜ್ಯಸಭೆಯಲ್ಲಿ ಖಂಡಿಸಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಖಂಡ ಭಾರತವನ್ನು ಕಾಂಗ್ರೆಸ್ ಪ್ರತಿಪಾದಿಸುತ್ತದೆ ಎಂದು ಹೇಳಿದ್ದಾರೆ












