ಉಡುಪಿ: ಅಂಚೆ ಇಲಾಖೆಯ ವತಿಯಿಂದ ಜೂನ್ 15 ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ಅಂಚೆ ಪಿಂಚಣಿ ಅದಾಲತ್ ನಡೆಯಲಿದೆ.
ಅಂಚೆ ಇಲಾಖೆಯ ಪಿಂಚಣಿದಾರರು ತಮ್ಮ ಅಹವಾಲುಗಳನ್ನು ಜೂನ್ 14 ರ ಒಳಗಾಗಿ ಮೇಲ್ಕಂಡ ಕಛೇರಿಗೆ ತಲುಪಿಸಬಹುದಾಗಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.

















