ರೋಹನ್ ಎಸ್. ಮೋನಿಸ್ ಅವರಿಂದ ಮಂಗಳೂರಿನ ಕಣಚೂರ್‌ನಲ್ಲಿ ನರ್ಸ್‌ಗಳಿಗೆ ಅಂಗಾಂಗ ದಾನದ ಬಗ್ಗೆ ಜಾಗೃತಿ ಮತ್ತು ಸಬಲೀಕರಣ.

ಮಂಗಳೂರು: ಕಣಚೂರ್ ಸಂಸ್ಥೆಗಳಲ್ಲಿ ‘ನರ್ಸಾರಾ 2026’ ಎಂಬ ವಿಷಯದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ನರ್ಸ್‌ಗಳ ದಿನಾಚರಣೆಯ ಸಂಭ್ರಮದಲ್ಲಿ, “ಅಂಗಾಂಗ ದಾನ – ದುರಂತವನ್ನು ವಿಜಯವಾಗಿ ಪರಿವರ್ತಿಸುವುದು” ಎಂಬ ವಿಷಯದ ಕುರಿತು ಒಂದು ಪ್ರಭಾವಶಾಲಿ ಅಧಿವೇಶನ ನಡೆಯಿತು. ಇದು ಈ ವರ್ಷದ ಘೋಷವಾಕ್ಯವಾದ “ನಮ್ಮ ನರ್ಸ್‌ಗಳು, ನಮ್ಮ ಭವಿಷ್ಯ. ಸಬಲೀಕೃತ ನರ್ಸ್‌ಗಳು ಜೀವಗಳನ್ನು ಉಳಿಸುತ್ತಾರೆ” ಎಂಬುದಕ್ಕೆ ಪೂರಕವಾಗಿತ್ತು.ಅಂಗಾಂಗ ದಾನದ ಬಗೆಗಿನ ಈ ಆಳವಾದ ಚಿಂತನ-ಮಂಥನ ಕಾರ್ಯಕ್ರಮವು 2026ರ ಮೇ 9 ರಂದು ಮಂಗಳೂರಿನ ಕಣಚೂರ್ ಹೆಲ್ತ್ ಕ್ಯಾಂಪಸ್‌ನ ಕಣಚೂರ್ ಕಾನ್ಫರೆನ್ಸ್ […]

ಎಸ್‌ಎಂಎಸ್ ಪದವಿಪೂರ್ವ ಕಾಲೇಜು, ಬ್ರಹ್ಮಾವರದಲ್ಲಿ ವಿದ್ಯಾರ್ಥಿ ನಾಯಕನ ಚುನಾವಣೆ ಯಶಸ್ವಿ.

ಬ್ರಹ್ಮಾವರ: ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನಲಿ (SMS PU College) 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ವಿದ್ಯಾರ್ಥಿ ನಾಯಕನ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಯಿತು. ಚುನಾವಣೆಯು ಗುಪ್ತ ಮತದಾನ (Secret Ballot) ಪದ್ಧತಿಯ ಮೂಲಕ ನಡೆದಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ವಿದ್ಯಾರ್ಥಿ ನಾಯಕನ ಹುದ್ದೆಗೆ ಆರು ವಿದ್ಯಾರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿ ಸ್ಪರ್ಧಿಸಿದ್ದರು. ಮತದಾನ ಪ್ರಕ್ರಿಯೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಐವನ್ ಡೊನಾತ್ ಸುವಾರಿಸ್ ಹಾಗೂ ಉಪನ್ಯಾಸಕರ ಮೇಲ್ವಿಚಾರಣೆಯಲ್ಲಿ ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ನಡೆಸಲಾಯಿತು.ಮತ ಎಣಿಕೆಯ ನಂತರ ಮಹಮ್ಮದ್ […]

ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ: ಅರ್ಜಿ ಆಹ್ವಾನ

ಉಡುಪಿ: ಮೈಸೂರು ಸಿದ್ದಾರ್ಥ ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು (ಕಾವಾ) ಇಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ರಾಜ್ಯ ಶಿಕ್ಷಣ ಪದ್ಧತಿಯಂತೆ ಪ್ರಥಮ ವರ್ಷದ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ (ಬಿ.ವಿ.ಎ) – ಸ್ನಾತಕ ಪದವಿ ತರಗತಿಗಳ ಪ್ರವೇಶಾತಿಗಾಗಿ ದ್ವಿತೀಯ ಪಿ.ಯು.ಸಿ / ಸಮಾನಾಂತರ ಕೋರ್ಸುಗಳಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ವೆಬ್‌ಸೈಟ್ htts://uucms.karnataka.gov.inನಲ್ಲಿ ಆನ್‌ಲೈನ್ ಮೂಲಕ ಜೂನ್ 12 ರ ವರೆಗೆ ಅರ್ಜಿ ಆಹ್ವಾನಿಸಲಾಗಿದೆ. ಸದರಿ ಪದವಿಯಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅನ್ವಯಕಲೆ, ಕಲಾ ಇತಿಹಾಸ […]

ಅಂಚೆ ಪಿಂಚಣಿ ಅದಾಲತ್

ಉಡುಪಿ: ಅಂಚೆ ಇಲಾಖೆಯ ವತಿಯಿಂದ ಜೂನ್ 15 ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ಅಂಚೆ ಪಿಂಚಣಿ ಅದಾಲತ್ ನಡೆಯಲಿದೆ. ಅಂಚೆ ಇಲಾಖೆಯ ಪಿಂಚಣಿದಾರರು ತಮ್ಮ ಅಹವಾಲುಗಳನ್ನು ಜೂನ್ 14 ರ ಒಳಗಾಗಿ ಮೇಲ್ಕಂಡ ಕಛೇರಿಗೆ ತಲುಪಿಸಬಹುದಾಗಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.

ಬೈಂದೂರು – ಪ್ರಾಕೃತಿಕ ವಿಕೋಪ ನಿರ್ವಹಣೆ: ಕಂಟ್ರೋಲ್ ರೂಂ ಸ್ಥಾಪನೆ

ಉಡುಪಿ: ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಹಾಗೂ ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷರ ಸೂಚನೆಯಂತೆ ಬೈಂದೂರು ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದಲ್ಲಿ, ತಾಲೂಕು ವಿಪತ್ತು ನಿರ್ವಹಣಾ ಸಹಾಯವಾಣಿ ಕೇಂದ್ರದ ದೂ.ಸಂಖ್ಯೆ: 08254-251657 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಬೈಂದೂರು ತಾಲೂಕು ತಹಶೀಲ್ದಾರರ ಕಛೇರಿ ಪ್ರಕಟಣೆ ತಿಳಿಸಿದೆ.