ಲಂಡನ್: ಜಗತ್ತಿನ ನಂಬರ್ 1 ಧನಿಕ ಎಲಾನ್ ಮಸ್ಕ್ ಒಡೆತನದ ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್ ತನ್ನ ಲೋಗೊ ಮತ್ತು ಹೆಸರನ್ನು ಬದಲಿಸಿಕೊಂಡಿದೆ. ನೀಲಿ ಹಕ್ಕಿ ಜಾಗದಲ್ಲೀಗ ಕಪ್ಪು ಬಿಳಿಯ X ಎಂಬ ವಿನ್ಯಾಸ ಕಾಣಿಸಿಕೊಂಡಿದೆ. ಜನಪ್ರಿಯ ಮಾಧ್ಯಮ ಟ್ವಿಟರ್ ಲೋಗೋ ಬದಲಾಗಿದೆ. ಮಾಲೀಕ ಎಲಾನ್ ಮಸ್ಕ್ ಹೊಸ ಲೋಗೋವನ್ನು ಅನಾವಣ ಮಾಡಿದರು.
ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದಲ್ಲಿನ ಟ್ವಿಟರ್ನ ಕೇಂದ್ರ ಕಚೇರಿಯಲ್ಲಿ ಮಾಲೀಕ ಎಲಾನ್ ಮಸ್ಕ್ X ಹೊಸ ಲೋಗೋವನ್ನು ಸೋಮವಾರ ಬಿಡುಗಡೆ ಮಾಡಿದರು. ಇದು ಸದ್ಯ ಕಂಪ್ಯೂಟರ್ಗಳ ಡೆಸ್ಟ್ಟಾಪ್ಗಳಲ್ಲಿ ಮಾತ್ರ ಕಾಣ ಸಿಗುತ್ತಿದೆ. ಮೊಬೈಲ್ ಆವೃತ್ತಿಯಲ್ಲಿ ಸದ್ಯಕ್ಕೆ ಬದಲಾವಣೆ ಮಾಡಲಾಗಿಲ್ಲ.ನ್ನು ಮುಂದೆ ಟ್ವಿಟರ್ ಕಂಪನಿ ಬದಲಾಗಿ X.COM ಸ್ಟಾರ್ಟ್ಅಪ್ನಡಿ ಕೆಲಸ ಮಾಡಲಿದೆ ಎಂದು ತಿಳಿದು ಬಂದಿದೆ.