ಪಿಎಂಇಜಿಪಿ ಯೋಜನೆ ಅಡಿಯಲ್ಲಿ ವಂಚನೆ: ಸಾರ್ವಜನಿಕರಿಗೆ ಎಚ್ಚರಿಕೆ

ಉಡುಪಿ, ಜುಲೈ 18: ಉಡುಪಿ ಮತ್ತು ಇತರ ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಕಾರ್ಯಕ್ರಮ (ಪಿಎಂಇಜಿಪಿ) ಅಡಿಯಲ್ಲಿ ಸಾಲ ಮತ್ತು ಸಬ್ಸಿಡಿ ಮಂಜೂರು ಮಾಡುವುದಾಗಿ ಕೆಲವೊಂದು ಸಂಸ್ಥೆಗಳು ಭರವಸೆ ನೀಡಿ, ಸಾರ್ವಜನಿಕರಿಗೆ ವಂಚಿಸುತ್ತಿರುವುದು ಕಚೇರಿಯ ಗಮನಕ್ಕೆ ಬಂದಿದೆ.
ತಮ್ಮ ವೈಯುಕ್ತಿಕ ಲಾಭಕ್ಕಾಗಿ ಮೋಸ ಮಾಡಲು ಪ್ರಯತ್ನಿಸುತ್ತಿರುವ ಇಂತಹ ಮೋಸದ ಅಂಶಗಳಿಗೆ ಉದ್ಯಮಿಗಳು ಬಲಿಯಾಗದಂತೆ ಪಿಎಂಇಜಿಪಿ ಯೋಜನೆಯ ರಾಜ್ಯ ಕಚೇರಿ, ಖಾದಿ ಮತ್ತು ಗ್ರಾಮಾಂತರ ಕೈಗಾರಿಕಾ ಆಯೋಗ, ಸಾರ್ವಜನಿಕರಿಗೆ ತಿಳಿಸಿದೆ.
ಅಂತಹ ಯಾವುದೇ ವ್ಯಕ್ತಿಗಳು/ ಸಂಸ್ಥೆಗಳನ್ನು ಸಾರ್ವಜನಿಕರು ಕಂಡರೆ, ತಕ್ಷಣವೇ ಕರ್ನಾಟಕದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಉಡುಪಿ ಅಥವಾ ಜಿಲ್ಲಾಧಿಕಾರಿ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಉಡುಪಿ ಅಥವಾ ಬೆಂಗಳೂರು ವಿಜಿನಾಪುರದ ರಾಮೂರ್ತಿ ನಗರದ ಹತ್ತಿರವಿರುವ ಕೆವಿಐಸಿ ಕಚೇರಿಯ ಗಮನಕ್ಕೆ ತರಬಹುದು ಅಥವಾ ರಾಜ್ಯ ಕಚೇರಿ, ಕೆವಿಐಸಿ, ದೂರವಾಣಿ ನಗರ, ಬೆಂಗಳೂರು, ದೂರವಾಣಿ ಸಂಖ್ಯೆ: 080-25665884, ಇ.ಮೇಲ್: [email protected] ಅಥವಾ ಜಿ.ರಾಮಚಂದನ್, ಜಿಲ್ಲಾ ಸಂಯೋಜಕರು, ಪಿಎಂಇಜಿಪಿ-ಕೆವಿಐಸಿ ಉಡುಪಿ, ಮೊಬೈಲ್ ನಂಬರ್: 9846869369 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.