ಜಿಲ್ಲಾ ಮಟ್ಟದ ಪ್ರಧಾನಿ ಮೋದಿ ಚಿತ್ರ ಬಿಡಿಸುವ ಸ್ಪರ್ಧೆ

ಉಡುಪಿ/ಮಂಗಳೂರು: ಸೆ.17 ರಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೆಲ್ಕಾರ್ ಯುವ ಸಂಗಮ ವತಿಯಿಂದ ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದಲ್ಲಿ ಮೋದಿಯವರ ಚಿತ್ರವನ್ನು ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಶಾಲಾ-ಕಾಲೇಜು ಮತ್ತು ಸಾರ್ವಜನಿಕರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಎ4 ಸೈಜ್ ಬಿಳಿ ಹಾಳೆಯಲ್ಲಿ ಪೆನ್ಸಿಲ್ ನಿಂದ ಚಿತ್ರ ರಚಿಸಬೇಕಿದ್ದು, ಆಯ್ಕೆಯಾದ ಚಿತ್ರಕ್ಕೆ ಸೂಕ್ತ ಬಹುಮಾನ ನೀಡಲಾಗುವುದು.

ಚಿತ್ರದ ಕೆಳಭಾಗದಲ್ಲಿ ಸ್ಪರ್ಧಿಯ ಹೆಸರು- ವಿಳಾಸ, ಮೊಬೈಲ್ ನಂಬ್ರ ನಮೂದಿಸಬೇಕು. ಅನುಭವಿ ಚಿತ್ರಕಲಾವಿದರು ತೀರ್ಪುಗಾರರಾಗಿ ಭಾಗವಹಿಸಲಿದ್ದು, ಅವರ ತೀರ್ಮಾನವೇ ಅಂತಿಮವಾಗಿರುತ್ತದೆ. ವಿಜೇತರ ವಿವರವನ್ನು ದಿನಪತ್ರಿಕೆ ಹಾಗೂ ದೂರವಾಣಿ ಮೂಲಕ ತಿಳಿಸಲಾಗುವುದು.

ಚಿತ್ರ ಕಳುಹಿಸಲು ಕೊನೆಯ ದಿನಾಂಕ ಸೆ.15. ಕಳುಹಿಸಬೇಕಾದ ವಿಳಾಸ: ಯುವ ಸಂಗಮ ಮೇಲ್ಕಾರ್, ಪಾಣೆಮಂಗಳೂರು ಅಂಚೆ, ಬಂಟ್ವಾಳ ತಾಲೂಕು 574231. ಹೆಚ್ಚಿನ ಮಾಹಿತಿಗಾಗಿ ಯುವ ಸಂಗಮವನ್ನು ಸಂಪರ್ಕಿಸುವಂತೆ ಅಧ್ಯಕ್ಷ ಶಿವಾನಂದ ಗುಡ್ಡೆಯಂಗಡಿ ತಿಳಿಸಿದ್ದಾರೆ.