ಉಡುಪಿ: ರಾಷ್ಟ್ರವು ಭಾರತ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ ಸ್ವತಂತ್ರ ಭಾರತದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಸುಸಂದರ್ಭದ ಸ್ಮರಣಾರ್ಥವಾಗಿ ಮಾನ್ಯ ಪ್ರಧಾನ ಮಂತ್ರಿಯವರು ಭಾರತ ಸರ್ಕಾರದ ಒಂಭತ್ತು ಮಂದಿ ಸಚಿವರು/ಇಲಾಖೆಗಳನ್ನು ಒಳಗೊಂಡ 16 ಯೋಜನೆಗಳು/ಕಾರ್ಯಕ್ರಮಗಳ ಕುರಿತು ಫಲಾನುಭವಿಗಳೊಂದಿಗೆ ಇದೇ ಮೇ, 31 ರಂದು ಚರ್ಚೆಯನ್ನು ನಡೆಸುವರು. ಪ್ರಧಾನಿಯವರು ಯಾವ ಯೋಜನೆಗಳ ಫಲಾನುಭವಿಗಳೊಂದಿಗೆ ಪರಸ್ಪರ ಸಂವಾದ ಪ್ರತಿಕ್ರಿಯೆಯಲ್ಲಿ ಭಾಗವಹಿಸುವರೋ ಅಂತಹ ಯೋಜನೆಗಳ ಪಟ್ಟಿಯನ್ನು ಇದರೊಂದಿಗೆ ಅಡಕಗೊಳಿಸಲಾಗಿದೆ.
ಈ ಯೋಜನೆಗಳು ನಮ್ಮ ಜನರ ಪೈಕಿ ಕಡು ಬಡವರನ್ನು ಒಳಗೊಳ್ಳುತ್ತಿರುವುದರಿಂದ ಇದಕ್ಕೆ ‘ಗರೀಬ್ ಕಲ್ಯಾಣ ಸಮ್ಮೇಳನ’ವೆಂದು ಹೆಸರಿಸಲಾಗಿದೆ. ಈ ಚರ್ಚೆಯ ಪ್ರಮುಖ ಉದ್ದೇಶವು ಜನರಿಗೆ ಸುಲಭವಾಗಿ ಬದುಕನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂಬುದಷ್ಟೇ ಅಲ್ಲದೆ ಇದನ್ನು ಒಮ್ಮುಖಗೊಳಿಸಿ ಪರಿಪೂರ್ಣಗೊಳಿಸುವ ಸಾಧ್ಯತೆಯನ್ನು ಅನ್ವೇಷಿಸುವುದಾಗಿದೆ.
ವಸತಿ, ಕುಡಿಯುವ ನೀರಿನ ಲಭ್ಯತೆ, ಆಹಾರ, ಆರೋಗ್ಯ ಮತ್ತು ಪೌಷ್ಠಿಕತೆ, ಜೀವನಕ್ರಮ ಮತ್ತು ಆರ್ಥಿಕತೆ ಸೇರ್ಪಡೆ ಇತ್ಯಾದಿಗಳ ಪ್ರಭಾವ ಕುರಿತಾದ ಸರ್ಕಾರದ ವ್ಯಾಪಕ ಯೋಜನೆಗಳು/ಕಾರ್ಯಕ್ರಮಗಳು ಫಲಾನುಭವಿಗಳ ಮೇಲೆ ಅವರ ಜೀವನದಲ್ಲಿ ಬೀರಿರುವ ಪ್ರಭಾವ ಕುರಿತಂತೆ ರಾಷ್ಟ್ರ ದಾದ್ಯಂತ ಎಲ್ಲಾ ಜಿಲ್ಲೆಗಳ ಫಲಾನುಭವಿಗಳೊಂದಿಗೆ ಮೋದಿ ಚರ್ಚಿಸಲಿರುವರು.
ಈ ಯೋಜನೆಗಳು/ಕಾರ್ಯಕ್ರಮಗಳು ಕೆಳಕಂಡಂತಿವೆ:
ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾ ಮೀಣ ಮತ್ತು ನಗರ ಪ್ರದೇಶಗಳೆರಡೂ ಒಳಪಡುತ್ತವೆ), ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಪೋಷನ್ ಅಭಿಯಾನ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಸ್ವಚ್ಛಭಾರತ ಅಭಿಯಾನ(ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡೂ ಒಳಪಡುತ್ತವೆ), ಜಲಜೀವನ್ ಅಭಿಯಾನ ಮತ್ತು ಅಮೃತ್, ಪ್ರಧಾನಮಂತ್ರಿ ಸ್ವನಿಧಿ ಯೋಜನೆ, ಒಂದು ದೇಶ ಒಂದು ಪಡಿತರ ಚೀಟಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಆಯುಶ್ಮಾನ್ ಭಾರತ್, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಆಯುಶ್ಮಾನ್ ಭಾರತ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಹಾಗೂ ಪ್ರಧಾನಮಂತ್ರಿ ಮುದ್ರಾಯೋಜನೆ.
ಉಡುಪಿ ಜಿಲ್ಲೆಯು ಈ ಮಹತ್ವಪೂರ್ಣ ಘಟನೆಯಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ದಿನಾಂಕ ಮೇ 31 ರಂದು ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿಮತ್ತು ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಕಾರ್ಯಕ್ರಮವನ್ನು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಅಂಗಾರ ಉದ್ಘಾಟಿಸುವರು. ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಉಡುಪಿ ಶಾಸಕ ಕೆ.ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಇನ್ನಿತರ ಗಣ್ಯರು ಪಾಲ್ಗೊಳ್ಳುವರು.
ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಪ್ರಧಾನಮಂತ್ರಿಯವರ ಕಾರ್ಯಕ್ರಮದೊಂದಿಗೆ ಬೆಳಿಗ್ಗೆ 11 ಕ್ಕೆ ಸರಿಯಾಗಿ ಸಂಪರ್ಕ ಕಲ್ಪಿಸಲಾಗುವುದು. ಸಿಮ್ಲಾದಲ್ಲಿ ಮೇ 31 ರಂದು ರಾಷ್ಟ್ರಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗುವುದು ಮತ್ತು ಪ್ರಧಾನಿ ಮೋದಿ ಫಲಾನುಭವಿಗಳೊಂದಿಗೆ ನೇರವಾಗಿ ಚರ್ಚಿಸುವರು. ಇದೇ ಸಂದರ್ಭದಲ್ಲಿ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತನ್ನು ಸಹ ಬಿಡುಗಡೆ ಮಾಡಲಾಗುವುದು. ಆನ್ಲೈನ್ ವಿಡಿಯೋ ಮೂಲಕ ಪ್ರಧಾನಮಂತ್ರಿ ರಾಷ್ಟ್ರವ್ಯಾಪಿ ಫಲಾನುಭವಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸುವರು.
ಈ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮವು ಜರುಗುವ ಸಂದರ್ಭದಲ್ಲಿಯೇ ದೂರದರ್ಶನದ ರಾಷ್ಟ್ರೀಯ ವಾಹಿನಿ ಮತ್ತು ಸ್ಥಳೀಯ ವಾಹಿನಿಗಳ ಮೂಲಕ ಪ್ರಸಾರ ಮಾಡಲಾಗುವುದು. ಈ ರಾಷ್ಟ್ರಮಟ್ಟದ ಕಾರ್ಯಕ್ರಮವನ್ನು MyGov ಮೂಲಕ ವೆಬ್ ಕ್ಯಾಸ್ಟ್ ಮಾಡಲು ಸಹ ಕ್ರಮ ವಹಿಸಲಾಗಿದೆ. ಪಾಲ್ಗೊಳ್ಳುವ ಆಸಕ್ತರು ತಮ್ಮ ಹೆಸರನ್ನು ನೊಂದಾಯಿಸಬೇಕು. ಈ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಾದ ಯುಟ್ಯೂಬ್, ಫೇಸ್ಬುಕ್, ಟ್ಟಿಟರ್, ಇನ್ಸ್ಟಗ್ರಾಮ್ ಇತ್ಯಾದಿಗಳ ಮೂಲಕವೂ ಸಹ ವೀಕ್ಷಿಸಬಹುದು.