ದೇಶ ಕಾಯುವ ವೀರ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ರಾಜಸ್ಥಾನದ ಜೈಸಾಲ್ಮೇರ್‌ನ ಲೋಂಗೆವಾಲದಲ್ಲಿ ಯೋಧರ ಜತೆ ದೀಪಾವಳಿ ಆಚರಿಸಲಿದ್ದಾರೆ.

ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ಸೇನಾ ಮುಖ್ಯಸ್ಥ ಎಂ.ಎಂ.ನರವಣೆ, ಬಿಎಸ್‌ಎಫ್‌ ಮಹಾ ನಿರ್ದೇಶಕ ರಾಕೇಶ್ ಅಸ್ತಾನಾ ಮೋದಿ ಜತೆ ಇರಲಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಬಾರಿ ದೀಪಾವಳಿ ಹಬ್ಬದ ದಿನದಂದು ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಸೆಲ್ಯೂಟ್ ಹೊಡೆಯಲು ದೀಪಗಳನ್ನು ಬೆಳಗಿಸಿ ಎಂದು ಶುಕ್ರವಾರ ಮೋದಿ ಟ್ವೀಟ್ ಮಾಡಿದ್ದರು.