ನವದೆಹಲಿ: ಇಂಡಿಯಾ ಟುಡೇ ಮಾಧ್ಯಮ ಸಂಸ್ಥೆಯು ಮೂಡ್ ಆಫ್ ದಿ ನೇಷನ್ ಸರ್ವೆ ನಡೆಸಿದೆ. ಅದರಂತೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣೆಯೇನಾದರೂ ನಡೆದರೆ 67% ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರಕ್ಕೆ ಬಹುಮತ ನೀಡಲಿದ್ದಾರೆ ಎಂದು ಸರ್ವೆ ತಿಳಿಸಿದೆ.
ಸರ್ವೆಯಲ್ಲಿ ಬಿಜೆಪಿಗೆ- 284, ಕಾಂಗ್ರೆಸ್ ಗೆ- 68, ಇತರರಿಗೆ- 191 ಸ್ಥಾನಗಳು ಲಭಿಸಿವೆ.
ಉತ್ತಮ ಪ್ರಧಾನಿ
ನರೇಂದ್ರ ಮೋದಿ: 47%
ಅಟಲ್ ಬಿಹಾರಿ ವಾಜಪೇಯಿ: 16%
ಇಂದಿರಾ ಗಾಂಧಿ: 12%
ಮನಮೋಹನ್ ಸಿಂಗ್: 08%
ಕಳೆದ ಎಂಟು ವರ್ಷಗಳ ಆಡಳಿತವನ್ನು ಮೆಚ್ಚಿಕೊಂಡಿರುವ 63% ಜನರು ಬಿಜೆಪಿ ಪ್ರಧಾನಿ ಮೋದಿಯವರನ್ನು ಉತ್ತಮ ಪ್ರಧಾನಿ ಎಂದು ಅಂಗೀಕರಿಸಿದ್ದಾರೆ.
ಈ ಅಂಗೀಕಾರದ ರೇಟಿಂಗ್ಗಳು ಆಗಸ್ಟ್ 22 ರಲ್ಲಿ 56% ಇದ್ದರೆ, ಜನವರಿ 23 ರಲ್ಲಿ 63% ಕ್ಕೆ ಏರಿಕೆಯಾಗಿರುವುದು ಜನರಿಗೆ ಮೋದಿ ನೇತೃತ್ವದಲ್ಲಿ ಹಿಂದಿನ ಬಾರಿಗಿಂತಲೂ ಹೆಚ್ಚಿನ ವಿಶ್ವಾಸ ಇದೆ ಎನ್ನುವುದನ್ನು ತೋರಿಸಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಆಡಳಿತ ವಿರೋಧಿ ಅಭಿಪ್ರಾಯ 32% ರಷ್ಟಿದ್ದರೆ ಈ ಬಾರಿ 18% ಕ್ಕೆ ಇಳಿದಿದೆ.
ಈ ನಡುವೆ ವಿರೋಧ ಪಕ್ಷವನ್ನು ಮುನ್ನಡೆಸಲು ಸಮರ್ಥರಾಗಿರುವವರು
ಕೇಜ್ರಿವಾಲ್ – 24%
ಮಮತಾ – 20%
ರಾಹುಲ್ ಗಾಂಧಿ – 13%
39% ಅಂಗೀಕಾರದೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅತ್ಯುತ್ತಮ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.