ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡಬೇಡಿ ಸದೆಬಡಿಯಿರಿ: ಪ್ರಧಾನಿ ಮೋದಿ

ನವದೆಹಲಿ: ಕೇಂದ್ರೀಯ ತನಿಖಾ ದಳದ ವಜ್ರ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಕ್ಕೆ ಭ್ರಷ್ಟಾಚಾರ ಅತಿ ದೊಡ್ಡ ತಡೆಗೋಡೆಯಾಗಿದ್ದು, ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿದ್ದರೂ ಸುಮ್ಮನೆ ಬಿಡಬೇಡಿ ಸದೆಬಡಿಯಿರಿ ಎಂದು ಹೇಳಿದರು.

ಭ್ರಷ್ಟರ ಅಧಿಕಾರ ಹಾಗೂ ಅವರ ವಾತಾವರಣಗಳನ್ನು ಕಂಡು ತನಿಖಾ ಸಂಸ್ಥೆಗಳು ಹಿಂಜರಿಯಬೇಕಾಗಿಲ್ಲ. ಭ್ರಷ್ಟಾಚಾರ ನಡೆಸುವ ವ್ಯಕ್ತಿಯನ್ನು ಸುಮ್ಮನೆ ಬಿಡಬಾರದು ಎನ್ನುವುದು ದೇಶದ ಜನರ ಹೆಬ್ಬಯಕೆ ಕೂಡ ಹೌದು. ನಿಮ್ಮ ಪ್ರಯತ್ನದಲ್ಲಿ ಯಾವುದೇ ಕೊರತೆ ಇರಬಾರದು. ಯಾವುದೇ ಭ್ರಷ್ಟಾಚಾರಿಯನ್ನು

ಸುಮ್ಮನೆ ಬಿಡಬಾರದು. ಸಿಬಿಐ ಸಂಸ್ಥೆ ಹೆಸರು ಈಗ ಪ್ರತಿಯೊಬ್ಬರ ಮಾತಿನಲ್ಲಿದೆ. ಸತ್ಯ ಮತ್ತು ನ್ಯಾಯಕ್ಕೆ ಇದು ಹೆಸರನ್ನು ಗಳಿಸಿದೆ ಎಂದು ಅವರು ತಿಳಿಸಿದರು.