ಉಡುಪಿ: ಇಂಡಿಯನ್ ಸೊಸೈಟಿ ಫಾರ್ ಸರ್ಜರಿ ಆಫ್ ದಿ ಹ್ಯಾಂಡ್ ಸಂಸ್ಥೆಯು ಕೈ ಶಸ್ತ್ರಚಿಕಿತ್ಸೆಯ ಪ್ರವರ್ತಕ ಡಾ ಭಾಸ್ಕರಾನಂದ ಕುಮಾರ್ ಅವರನ್ನು ಐ ಎಫ್ ಎಸ್ ಎಸ್ ಎಚ್ ( ಇಂಟರ್ ನ್ಯಾಷನಲ್ ಫ಼ೆಡರೇಶನ್ ಆಫ್ ಸೊಸೈಟೀಸ್ ಫಾರ್ ಸರ್ಜರಿ ಆಫ್ ಹ್ಯಾಂಡ್) ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದು, ಐ ಎಫ್ ಎಸ್ ಎಸ್ ಎಚ್ ಸಂಸ್ಥೆಯ ನಾಮನಿರ್ದೇಶನ ಸಮಿತಿಯು ಅದನ್ನು ಅನುಮೋದಿಸಿದೆ. ಜೂನ್ 6 ರಂದು ಲಂಡನ್ ನ ಐ ಎಫ್ ಎಸ್ ಎಸ್ ಎಚ್ ಕಾಂಗ್ರೆಸ್ನ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಕೆಎಂಸಿ ಮಣಿಪಾಲದ ಕೈ ಶಸ್ತ್ರಚಿಕಿತ್ಸೆಯ ಮುಖ್ಯಸ್ಥ ಮತ್ತು ಮೂಳೆಚಿಕಿತ್ಸೆಯ ಪ್ರಾಧ್ಯಾಪಕ ಡಾ ಭಾಸ್ಕರಾನಂದ ಕುಮಾರ್ ಜೂನ್ 6 ರಂದು ಲಂಡನಿನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.