ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಕಾಣುತ್ತಿದೆ. ಹೀಗಾಗಿ ದೇಶದಲ್ಲಿ ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಇಳಿಕೆ ಕಂಡುಬರುತ್ತಿದ್ದು, ಶನಿವಾರ ಪ್ರತಿ ಲೀಟರ್ ಪೆಟ್ರೋಲ್ಗೆ 39 ಪೈಸೆ ಮತ್ತು ಡೀಸೆಲ್ಗೆ 30 ಪೈಸೆ ಇಳಿಕೆಯಾಗಿದೆ.
ಚಿಲ್ಲರೆ ಮಾರಾಟ ದರ ಒಂದು ಲೀಟರ್ ಪೆಟ್ರೋಲ್ ₹ 69.82 ಮತ್ತು ಡೀಸೆಲ್ ₹ 63.67ಕ್ಕೆ ತಲುಪಿದೆ. ಡಿ.21 ರಿಂದ ಡಿ.29ರವರೆಗೆ ಲೀಟರ್ ಪೆಟ್ರೋಲ್ ದರ ₹1.24 ಮತ್ತು ಡೀಸೆಲ್ ದರ ₹1.1ರಷ್ಟು ಕಡಿಮೆಯಾಗಿದೆ.