ಮುಂಬೈ: ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಂದು ಕೂಡ ಹೆಚ್ಚಳವಾಗಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.
ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತಲಾ 35 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್‌ಗೆ ಕ್ರಮವಾಗಿ ₹108.64 ಮತ್ತು ₹97.37 ಮುಟ್ಟಿದೆ.
ಮುಂಬೈನಲ್ಲಿ ಪೆಟ್ರೋಲ್ ₹112.44 ಮತ್ತು ಡೀಸೆಲ್ ₹103.26ಕ್ಕೆ ಏರಿಕೆಯಾಗಿದೆ.
ಕೋಲ್ಕತ್ತದಲ್ಲಿ ಪೆಟ್ರೋಲ್ ₹107.12, ಡೀಸೆಲ್ ₹98ಕ್ಕೆ ತಲುಪಿದೆ.
ಚೆನ್ನೈನಲ್ಲಿ ಪೆಟ್ರೋಲ್ ₹103.26 ಮತ್ತು ಡೀಸೆಲ್ ₹99.68ಕ್ಕೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ₹ 112.39 ಮತ್ತು ಡೀಸೆಲ್ ಬೆಲೆ ₹ 103.31 ರಷ್ಟಾಗಿದೆ