ಪೊದಾರ್ ಇಂಟರ್‍ನ್ಯಾಷನಲ್ ಸ್ಕೂಲ್: ಶಾಲಾ ಮಕ್ಕಳಿಂದ ಮಳೆಕಾಡುಗಳ ಅಧ್ಯಯನ

ಉಡುಪಿ: ಪೊದಾರ್ ಇಂಟರ್‍ನ್ಯಾಷನಲ್ ಸ್ಕೂಲ್ ಉಡುಪಿ ಇದರ ವತಿಯಿಂದ ಇಂಟಿಗ್ರೇಟೆಡ್ ಇಂಗ್ಲೀಷ್ ಎಂಬ ವಿಷಯಾಧಾರಿತ ಕಲಿಕೆಯ ಒಂದು ಭಾಗವಾಗಿ ‘ಅತೀಂದ್ರೀಯ ಮಳೆಕಾಡು’ ಎಂಬ ಶೀರ್ಷಿಕೆಯಡಿ ಮಕ್ಕಳಿಗೆ ಮಳೆಕಾಡುಗಳ ಬಗ್ಗೆ ಅಧ್ಯಯನವು ನಿರಂತರವಾಗಿ ಒಂದು ತಿಂಗಳ ಕಾಲ ನಡೆಯಿತು. ಇದರ ಅಂತಿಮ ಹಂತವಾಗಿ ನಡೆದ ಸಭಾ ಕಾರ್ಯಕ್ರಮ ಶಾಲೆಯ ವಾಚನಾಲಯದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಅರಣ್ಯ ಅಧಿಕಾರಿಗ ಕ್ಲಿಫ್ಫರ್ಡ್ ಲೋಬೋ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಡುಗಳು ಪ್ರಕೃತಿಯ ಅಮೂಲ್ಯ ಕೊಡುಗೆ.ಅವುಗಳನ್ನು ಸಂರಕ್ಷಿಸಬೇಕು.ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಉಳಿಸಬೇಕು ಎಂದರು. ಮಕ್ಕಳು ಅರಣ್ಯದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು.


ಶಾಲಾ ಪ್ರಾಂಶುಪಾಲರಾದ ಎಂ.ಎಸ್.ಹಿರೇಮಠ ಅವರು ಮಾತನಾಡಿ ಪರಿಸರವನ್ನು ರಕ್ಷಿಸುವಲ್ಲಿ ಮಕ್ಕಳು ಕಾರ್ಯಪ್ರವೃತರಾಗಬೇಕು. ಈಗಿನಿಂದಲೇ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು.ಎಂದರು.

ಶಾಲಾ ಮಕ್ಕಳಿಂದ ಸಾಂಸೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಬುಡಕಟ್ಟು ಜನಾಂಗದವರ ನೃತ್ಯ,ಮೂಕಾಭಿನಯ,ಮುಂತಾದ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿನಿ ಆಶ್ನಿತಾ ನಿರೂಪಿಸಿದರು. ವಿದ್ಯಾರ್ಥಿನಿ ಧೃತಿಕಾ ಸ್ವಾಗತಿಸಿ, ಸಮೃದ್ಧಿ ವಂದಿಸಿದರು.