ಪೆರಂಪಳ್ಳಿ: ಕೆಥೋಲಿಕ್ ಸಭಾ, ಪೆರಂಪಳ್ಳಿ ಇವರ ಆಶ್ರಯದಲ್ಲಿ ‘ನೇತ್ರಸಂಗಮ’ ಐ ಕೇರ್ ಆಂಡ್ ಲೇಸರ್ ಸೆಂಟರ್ ಮಣಿಪಾಲ ಹಾಗೂ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ನ ಒಪ್ಟೊಮೆಟ್ರಿ ವಿಭಾಗ ಇವರ ಜಂಟಿ ಸಹಯೋಗದೊಂದಿಗೆ ಪೆರಂಪಳ್ಳಿ ಚರ್ಚ್ ನ ಫಾತಿಮಾ ಸಭಾಭವನದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
ಪೆರಂಪಳ್ಳಿ ಚರ್ಚ್ ನ ಫಾದರ್ ಅನಿಲ್ ಡಿಸೋಜಾ ಶಿಬಿರವನ್ನು ಉದ್ಘಾಟಿಸಿದರು. ಮಣಿಪಾಲ ‘ನೇತ್ರಸಂಗಮ’ ದ ಹೆಸರಾಂತ ನೇತ್ರತಜ್ಞೆ ಡಾ.ಲಾವಣ್ಯ ರಾವ್ ಮಾತನಾಡಿ, ಡಯಾಬಿಟಿಸ್ ನಿಂದ ಕಣ್ಣಿನ ದೃಷ್ಟಿಹೀನತೆ ಹಾಗೂ ನೇತ್ರದಾನದ ಬಗ್ಗೆ ವಿವರಿಸಿದರು.
ಶಿಬಿರದ ಪ್ರವರ್ತಕರಾದ ಕರ್ನಾಟಕ ಕರಾವಳಿಯ ಹೆಸರಾಂತ ಹಾಗೂ ಜನಪ್ರಿಯವಾಗಿರುವ ‘ಐ-ನೀಡ್ಸ್’ ಮಲ್ಟಿಬ್ರಾಂಡ್ ಒಪ್ಟಿಕಲ್ಸ್ ಸ್ಟೋರ್ಸ್ ಸಂಸ್ಥಾಪಕರಾದ ಹರಿಖಂಡಿಗೆ ಗಜಾನನ ನಾಯಕ್, ಪೆರಂಪಳ್ಳಿ ಕೆಥೋಲಿಕ್ ಸಭಾದ ಒಲೀವರ್ ಡಿಸೋಜಾ ಉಪಸ್ಥಿತರಿದ್ದರು. ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಸುಮಾರು 86 ಜನರು ನೇತ್ರ ತಪಾಸಣೆಯ ಸದುಪಯೋಗ ಪಡೆದುಕೊಂಡರು.