ಕಾರ್ಕಳ ಜೋಡು ರಸ್ತೆ ಪೂರ್ಣಿಮಾ ಸಿಲ್ಕ್ಸ್ ಗೆ ಪೇಜಾವರ ಶ್ರೀಗಳ ಭೇಟಿ

ಕಾರ್ಕಳ: ಕಾರ್ಕಳದ ಜೋಡು ರಸ್ತೆಯಲ್ಲಿರುವ ಪೂರ್ಣಿಮಾ ಸಿಲ್ಕ್ಸ್ ಗೆ ಪೇಜಾವರ ಮಠದ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪೂರ್ಣಿಮಾ ಸಿಲ್ಕ್ಸ್ ನ ಪಾಲುದಾರರಾದ ರವಿ ಪ್ರಕಾಶ್ ಪ್ರಭು ಮತ್ತು ಪತ್ನಿ ಕಿರಣಾ ರವಿ ಅವರು ಶ್ರೀಗಳಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಆಶೀರ್ವಾದ ಪಡೆದರು.

ಶ್ರೀಗಳು, ರವಿ ಪ್ರಕಾಶ್ ದಂಪತಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ರವಿ ಪ್ರಕಾಶ್ ಪ್ರಭು ಅವರಿಗೆ ಶಾಲು ಹೊದಿಸಿ ಆಶೀರ್ವಾದಿಸಿದರು. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ಅತಿ ಶೀಘ್ರದಲ್ಲಿ ಅದರ ಸಹ ಸಂಸ್ಥೆ ಫುಡ್ ಕೋರ್ಟ್, ಫ್ಯಾಮಿಲಿ ಸ್ಪಾ, ಕಾಸ್ಮೆಟಿಕ್ ಫೂಟ್ ವೇರ್ ಹಾಗೂ ಪುರುಷರ ಮತ್ತು ಮಹಿಳೆಯರ ಎಥ್ನಿಕ್ ವೇರ್, ಮೊಬೈಲ್ ಶೋರೂಂ ಎಲ್ಲವೂ ಒಂದೇ ಸೂರಿನಡಿ ಜೋಡು ರಸ್ತೆಯಲ್ಲಿರುವ ನೂತನ ವಾಣಿಜ್ಯ ಸಂಕೀರ್ಣ ಪ್ರೈಮ್ ಮಾಲ್ ನ 2ನೇ ಮಹಡಿಯಲ್ಲಿ “ಪೂರ್ಣಿಮಾ ಲೈಫ್ ಸ್ಟೈಲ್ ಶೀಘ್ರದಲ್ಲಿ ಆರಂಭಗೊಳ್ಳಲಿ ಎಂದು ಹಾರೈಸಿದರು.

ಜೋಡು ರಸ್ತೆಯಲ್ಲಿನ ಪೂರ್ಣಿಮಾ ಸಿಲ್ಕ್ಸ್ ಮತ್ತು ಪೂರ್ಣಿಮಾ ಲೈಫ್ ಸ್ಟೈಲ್ ಸಂಸ್ಥೆ ಗಳಿಂದ ಇನ್ನಷ್ಟು ಸಮಾಜ ಮುಖಿ ಕಾರ್ಯಗಳು ನಡೆಯಲಿ ಎಂದು ಆಶೀರ್ವದಿಸಿದರು.