ಉಡುಪಿ: ಜಿಲ್ಲೆಯ ಒಟ್ಟು ನಾಲ್ಕು ತಾಲ್ಲೂಕಿನ 67 ಪಂಚಾಯಿತಿಗಳಿಗೆ ಇಂದು ಶಾಂತಿಯುತ ಮತದಾನ ನಡೆದಿದ್ದು, ಶೇ. 74.06 ಮತದಾನವಾಗಿದೆ.
ಉಡುಪಿ ತಾಲ್ಲೂಕಿನಲ್ಲಿ ಶೇ. 74.80, ಹೆಬ್ರಿ ತಾಲ್ಲೂಕಿಲ್ಲಿ ಶೇ. 79.41, ಬ್ರಹ್ಮಾವರ ತಾಲ್ಲೂಕಿನಲ್ಲಿ ಶೇ. 73.69 ಹಾಗೂ ಬೈಂದೂರಿನಲ್ಲಿ ಶೇ. 71.28 ರಷ್ಟು ಮತದಾನ ಆಗಿದ್ದು, ಜಿಲ್ಲೆಯಲ್ಲಿ ಮತದಾನ ಮುಕ್ತಾಯವಾದ ವೇಳೆಗೆ ಒಟ್ಟು ಶೇ. 74.06 ರಷ್ಟು ಮತದಾನ ಆಗಿದೆ.
ಬೆಳಿಗ್ಗೆನಿಂದಲೇ ಮತದಾರರು ತಮ್ಮ ಹಕ್ಕು ಚಲಾಯಿಸಲು ಉತ್ಸಾಹದಿಂದ ಭಾಗವಹಿಸಿದ್ದು, ಬೆಳಿಗ್ಗಿನಿಂದ ಮಧ್ಯಾಹ್ನದವರೆಗೆ ಬಿರುಸಿನಿಂದ ಮತದಾನ ನಡೆಯಿತು. ಮಧ್ಯಾಹ್ನದ ಬಳಿಕ ಕೊಂಚ ನಿಧಾನಗತಿಯಿಂದ ಮತದಾನ ಆದರೂ, ಸಂಜೆಯ ವೇಳೆ ಕೆಲಸದಿಂದ ಬಂದ ಮತದಾರರು ಮತ ಚಲಾಯಿಸಿದರು.
ಜಿಲ್ಲೆಯ ಕೋಡಿ ಪಂಚಾಯತ್ ನಲ್ಲಿ ಜನರು ಮತದಾನ ಬಹಿಷ್ಕರಿಸಿದ ಪರಿಣಾಮ ಮತದಾನ ನಡೆದಿಲ್ಲ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಮುಂದಿನ ದಿನಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿ ಮಾಡಿದರೆ ಜಿಲ್ಲಾಡಳಿತ ಚುನಾವಣೆ ನಡೆಸಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.