ಸಹಕಾರಿ ಬ್ಯಾಂಕ್ ಗಳನ್ನು ಆರ್ ಬಿಐ ಸುಪರ್ದಿಗೆ ತರುವ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ ಅಂಗೀಕಾರ

ನವದೆಹಲಿ: ಸಹಕಾರಿ ಬ್ಯಾಂಕ್ ಗಳನ್ನು ಆರ್ ಬಿಐ ಸುಪರ್ದಿಗೆ ತಂದು ಬಲಪಡಿಸಲು ಉದ್ದೇಶಿಸಿರುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಕರಡು ಮಸೂದೆಗೆ ಸಂಸತ್ತು ಮಂಗಳವಾರ ಅನುಮೋದನೆ ನೀಡಿದೆ.

ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ 2020 ಅನ್ನು ಸುಗ್ರೀವಾಜ್ಞೆಯ ಬದಲಿಗೆ ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಬಂಡವಾಳಕ್ಕೆ ಅವಕಾಶ, ಆಡಳಿತ ಸುಧಾರಣೆ ಮತ್ತು ಆರ್ ಬಿಐ ಮೂಲಕ ಸದೃಢ ಬ್ಯಾಂಕಿಂಗ್ ವ್ಯವಸ್ಥೆಯನ್ನು ಖಾತ್ರಿಪಡಿಸುವ ಮೂಲಕ ಸಹಕಾರಿ ಬ್ಯಾಂಕ್ ಗಳನ್ನು ಬಲಪಡಿಸಲು ಈ ಮಸೂದೆ ಸಹಕಾರಿಯಾಗಲಿದೆ. ತಿದ್ದುಪಡಿಗೆ ಸೆಪ್ಟೆಂಬರ್ 16ರಂದು ಲೋಕಸಭೆಯಲ್ಲಿ ಅನುಮೋದನೆ ದೊರಕಿತ್ತು.