ನೈಮಿಷಾರಣ್ಯದ ವಿನಾಯಕ ದೇವರ ದರ್ಶನ ಪಡೆದ ಪೇಜಾವರ ಶ್ರೀ

ಉತ್ತರಪ್ರದೇಶ: ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಇಂದು ನೈಮಿಷಾರಣ್ಯ ತೀರ್ಥಕ್ಷೇತ್ರಗಳ ಪ್ರವಾಸ ಕೈಗೊಂಡರು.

ನೈಮಿಷಾರಣ್ಯದಲ್ಲಿ ಚಕ್ರ ತೀರ್ಥ ಸ್ನಾನ ಮತ್ತು ಗೋಮತಿ ನದಿ ಸ್ನಾನ ಮಾಡಿದ ಶ್ರೀಗಳು, ಬಳಿಕ ವ್ಯಾಸ ಗದ್ದುಗೆ ದರ್ಶನ ಪಡೆದರು. ಸಂಜೆ ಹರಿದ್ವಾರಕ್ಕೆ ಭೇಟಿ ನೀಡಿದರು.

ನಾಳೆ ಶ್ರೀಗಳು ಬದ್ರಿ ಪ್ರಯಾಣ ಮಾಡಲಿದ್ದಾರೆ. ನ. 5ರಂದು ಬದ್ರಿ ನಾರಾಯಣ ದೇವರ ದರ್ಶನ ಪಡೆದು, ನ. 6ರಂದು ಹರಿದ್ವಾರದಿಂದ ವಾಪಸಾಗುವರು.