ಕೊಡವೂರು: ಹಿಂದೂ ಸಮಾಜ ಬಲಿಷ್ಠವಾಗಬೇಕು. ಹಿಂದೂ ಸಮಾಜ ಸಂಘಟಿತವಾಗಬೇಕು. ಆರೋಗ್ಯವಂತ ಹಿಂದೂ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ನಗರಸಭಾ ಸದಸ್ಯ ಕೆ. ವಿಜಯ ಕೊಡವೂರು ಹೇಳಿದರು.
ಕೊಡವೂರು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸಮಾಜವನ್ನು ಒಂದು ಮಾಡುವ ರಕ್ಷಾಬಂಧನದಂತ ಕಾರ್ಯಕ್ರಮ ಅರ್ಥ ಪೂರ್ಣವಾಗಿದೆ. ಅಣ್ಣ ತಂಗಿಯನ್ನು ರಕ್ಷಣೆ ಮಾಡುವುದು. ಅದರ ಜೊತೆಗೆ ಸಮಾಜದ ರಕ್ಷಣೆಯನ್ನು ಮಾಡಬೇಕು ಎನ್ನುವ ಈ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ನಮ್ಮ ಹಿರಿಯರು ನಮಗೆ ಕೊಟ್ಟು ಹೋಗಿದ್ದಾರೆ. ಆದ್ದರಿಂದ ಇದನ್ನು ನಾವು ಮುಂದುವರಿಸಬೇಕು. ಮುಂದುವರಿಸುತ್ತಾ ಸದಾ ಈ ದೇಶ ಧರ್ಮದ ಬಗ್ಗೆ ಯೋಚನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆಯ ಹೈಸ್ಕೂಲ್ ನ ಮುಖ್ಯೋಪಾಧ್ಯಾಯ ಶಶಿಕುಮಾರ್, ಉದ್ಯಮಿ ಪ್ರಕಾಶ್ ಕರ್ಕೇರ ಮತ್ತು ರಮೇಶ್ ಕೊಪ್ಪಲ್ ತೋಟ ಉಪಸ್ಥಿತರಿದ್ದರು. ಅಜಿತ್ ಸೇನದಾಜಿಡ್ಡ ಸ್ವಾಗತಿಸಿ ವಂದಿಸಿದರು.